ಐಸಿಸಿ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡ ಪ್ರಕಟ 
ರಾಜ್ಯ

ಐಸಿಸಿ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಜೋಹನ್ಸ್‌ಬರ್ಗ್: ಸ್ಫೋಟಕ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ರ‌್ಯಾನ್ ರಿಕೆಲ್‌ಟನ್ ಅವರನ್ನು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡದಿಂದ ಕೈಬಿಡಲಾಗಿದೆ. ಏಡನ್ ಮಾರ್ಕ್ರಮ್ ತಂಡದ ಸಾರಥ್ಯ ವಹಿಸಿದ್ದು, 2024ರ ಆವೃತ್ತಿಯಲ್ಲಿ ಆಡಿದ್ದ 7 ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ. ಹಾಲಿ ರನ್ನರ್ ಅಪ್ ಆಫ್ರಿಕಾ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು,ಕೆನಡ ಎದುರು ತನ್ನ ಅಭಿಯಾನ ಆರಂಭಿಸಲಿದೆ.
ತಂಡ: ಏಡನ್ ಮಾರ್ಕ್ರಮ್ (ನಾಯಕ), ಕಾರ್ಬಿನ್ ಬಾಷ್, ಡಿವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್ (ವಿ.ಕೀ), ಟೋನಿ ಡಿ ಜಾರ್ಜಿ, ಡೊನಾವನ್ ಫೆರೀರ, ಮಾರ್ಕೋ ಯಾನ್ಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೆನಾ ಮಕಾ, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಕಿಯಾ, ಕಗಿಸೊ ರಬಾಡ, ಜೇಸನ್ ಸ್ಮಿತ್.