ಕುಣಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಮಿಷನ್ ಸಂಸ್ಥೆ ಮತ್ತು ಉದ್ಯಮಿ ಗೌರಿಬಿದನೂರು ಡಾ.ಎ.ಸಿ.ನಾಗ ರಾಜ್ ಅಭಿಮಾನಿ ಬಳಗದಿಂದ ಇತ್ತೀಚೆಗೆ ಸ್ವೆಟರ್ ವಿತರಿಸಲಾಯಿತು.
ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ರಾಷ್ಟ್ರೀಯ ಗ್ರಾಮೀಣ ಮಿಷನ್ ಸಂಸ್ಥೆ ಮತ್ತು ಉದ್ಯಮಿ ಗೌರಿಬಿದನೂರು ಡಾ.ಎ.ಸಿ.ನಾಗರಾಜ್ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ಸ್ವೆಟರ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಳ್ಳೂರು ನಾಗರಾಜು, ಕೃಷ್ಣಪ್ಪ, ಉಪವಲಯ ಅರಣ್ಯಾಧಿಕಾರಿ ಬಿ.ಅನಂತರಾಮು, ಗಸ್ತು ಅರಣ್ಯ ಪಾಲಕ ಎಸ್.ರಾಜು, ಮುಖ್ಯ ಶಿಕ್ಷಕ ಎನ್.ಮಹದೇವ, ಮಣಿಕಂಠ, ವೆಂಕಟರಮಣ ಶೆಟ್ಟಿ, ಕುಮಾರ್, ನಾಗಸಂದ್ರ, ಸುರೇಶ್, ಸಿಆರ್‌ಪಿ ಅನಿತಾ, ಬಿಆರ್‌ಪಿ ವಾಣಿ ಸತೀಶ್, ಕೆಂಪರಾಜು ಇತರರಿದ್ದರು.