pandit narasimhalu vadavati
ರಾಯಚೂರು ಸ್ವರ ಸಂಗಮ ಸಂಗೀ ತ ವಿದ್ಯಾ ಸಂಸ್ಥೆಯಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿಯವರ 37 ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಡಿ.21 ರಂದು ಸಂಜೆ 6 ಗಂಟೆಗೆ ನಗರದ ಉದಯ ನಗರದ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯಲ್ಲಿ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆಂದು ಸಂಸ್ಥೆಯ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ ಪಂ.ನರಸಿಂಹಲು ವಡವಾಟಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ಸಮ್ಮೇಳನದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹೀರೆಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ. ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಶಿವಪ್ರಸಾದ ಜಂಬಲದಿನ್ನಿ, ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಪಿ.ಸಾಗರ್, ರವಿ ಬೋಸರಾಜ, ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ ಆಗಮಿಸಲಿದ್ದಾರೆ ಎಂದರು.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಅವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಸಂಗೀತ ಸಮ್ಮೇಳನದಲ್ಲಿ ಖ್ಯಾತ ವೈಯಲಿನ್ ವಾದಕ ದೆಹಲಿಯ ಸಂತೋಷ ನಹಾರ್, ವಡವಾಟಿ ಶಾರದಾ ಭರತ, ತಬಲಾ ಸೋಲೋ ಪವನ , ಪ್ರಣಮಿತ್ ರಾಯ ಮತ್ತು ಕೃಷ್ಣ ರಿಂದ ಸಂಗೀತಾ ಗಾಯನ, ವಿಶ್ವನಾಥ ನಾಕೋಡರಿಂದ ತಬಲಾ, ಹರಿಕೃಷ್ಣರಿಂದ ಹಾರ್ಮೋನಿಯಂ, ಕೋಪ್ರೇಶ ದೇಸಾಯಿ ತಬಲಾ ವಾಹನ ನಡೆಯಲಿದೆ ಎಂದರು.