ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸುವಾಸ್‌ಶೆಟ್ಟಿ ಅಧ್ಯಕ್ಷ Development 
ರಾಜ್ಯ

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸುವಾಸ್‌ಶೆಟ್ಟಿ ಅಧ್ಯಕ್ಷ Development

ಮುಳಬಾಗಿಲು: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಾಂಗ್ರೆಸ್ ಮುಖಂಡ ಆರ್.ಎಸ್.ಸುವಾಸ್ ಶೆಟ್ಟಿ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಸದಸ್ಯರಾದ ಗರಡಿ ಆರ್.ಶಂಕರಪ್ಪ, ಆಂಜನೇಯರೆಡ್ಡಿ, ಮೊಹಮ್ಮದ್ ಇದಾಯಿತ್ ಅಲಿ ಅವರೊಂದಿಗೆ ಶುಕ್ರವಾರ ನಗರಸಭೆ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿದರು. Development Authority
ಜೆಡಿಎಸ್ ಶಾಸಕ ಸಮೃದ್ಧಿ ವಿ.ಮಂಜುನಾಥ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅವಾನುಲ್ಲ, ಕಾಂಗ್ರೆಸ್ ಮುಖಂಡರಾದ ಸಿ.ಎಂ.ವೆಂಕಟರಾಮೇಗೌಡ ಗಾಂಧಿ, ಗುಮ್ಮಕಲ್ಲು ರಾಮರೆಡ್ಡಿ, ಗುಜ್ಜನಹಳ್ಳಿ ಮಂಜುನಾಥ್, ಮೇಲಾಗಾಣಿ ಎಂ.ಸಿ.ಸರ್ವಜ್ಞ ಗೌಡ, ಜಮ್ಮನಹಳ್ಳಿ ಕೃಷ್ಣಪ್ಪ, ಎಂ.ಪಿ.ನವೀನ್ ಕುವಾರ್, ತಿರುವೇಣಿಯಮ್ಮ, ನಾಗನಾಥೇಶ್ವರಿ, ಮಂಜುಳಮ್ಮ, ಈಶ್ವರಮ್ಮ, ನಗರಸಭೆ ವಾಜಿ ಅಧ್ಯಕ್ಷ ಎಂ.ಮುನಿರಾಜು, ವಾಜಿ ಸದಸ್ಯ ಮೊಹಮ್ಮದ್ ಜಬಿವುಲ್ಲಾ ಸೇರಿ ಅನೇಕ ಮುಖಂಡರು ನೂತನ ಅಧ್ಯಕ್ಷರು, ಸದಸ್ಯರಿಗೆ ಅಭಿನಂದಿಸಿದರು.
ಶಾಸಕ ಸಮೃದ್ಧಿ ವಿ.ಮಂಜುನಾಥ್ ವಾತನಾಡಿ, ಮುಳಬಾಗಿಲು ನಗರಾಭಿವೃದ್ಧಿ ರಚನೆಗೆ 4 ವರ್ಷದ ಹಿಂದೆ ಸಚಿವರಾಗಿದ್ದ ಎಚ್.ನಾಗೇಶ್ ಅವರು ಆಗಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒತ್ತಡ ತಂದಿದ್ದರು. ಅವರು ವಾಜಿ ಶಾಸಕರಾದ ನಂತರ ನಾನೂ ಹಾಗೂ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಸರ್ಕಾರಕ್ಕೆ ದುಂಬಾಲು ಬಿದ್ದು, ಎರಡು ವರ್ಷಗಳ ಪರಿಶ್ರಮದಿಂದ ಮುಳಬಾಗಿಲಿಗೆ ಪ್ರಾಧಿಕಾರ ಸಿಕ್ಕಿದೆ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಸೇವೆ ಸಲ್ಲಿಸುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ನೂತನ ಅಧ್ಯಕ್ಷ ಆರ್.ಎಸ್.ಸುವಾಸ್ ಶೆಟ್ಟಿ ವಾತನಾಡಿ, ನಗರದ ಅಭಿವೃದ್ಧಿಗೆ ಎಲ್ಲ ರೀತಿಯಲ್ಲೂ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.