ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ವಿಭೂತಿಪುರಮಠದಿಂದ ಪ್ರತಿವರ್ಷ ಕೊಡಮಾಡುವಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಪ್ರದಾನ ಸಮಾರಂಭವು ಸೋಮವಾರಶ್ರೀಮಠದ ಜಗದ್ಗುರು ಪಂಚಾಚಾರ್ಯಸಮುದಾಯ ಭವನದಲ್ಲಿ ನಡೆಯಿತು.
ಕಡೇಕಾರ್ತೀಕ ಸೋಮವಾರದ ಅಂಗವಾಗಿಕ್ಷೇತ್ರನಾಥ ವೀರಭದ್ರ ಸ್ವಾಮಿಯಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದಸಮಾರಂಭದಲ್ಲಿ ಶಿಕ್ಷಣ ತಜ್ಞನಾಡೋಜ ಡಾ.ವೂಡೇಪಿ. ಕೃಷ್ಣಅವರಿಗೆ ಸುವರ್ಣಶ್ರೀ ರಾಷ್ಟ್ರೀಯಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈಸಂದರ್ಭದಲ್ಲಿ ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದ ಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮೀಜಿ,ಸಮಾಜದಲ್ಲಿಸಜ್ಜನರು, ಸೇವಾಪರವಾಗಿ ಜೀವನ ನಡೆಸಿದ ಉತ್ತಮವ್ಯಕ್ತಿಗಳನ್ನು ಸನ್ಮಾನಿಸುವುದರಿಂದಯುವಜನಾಂಗಕ್ಕೆ,ವಿದ್ಯಾರ್ಥಿಗಳಿಗೆಪ್ರೇರಣೆ ದೊರೆಯುತ್ತದೆ.ಶ್ರೀಮಠದಲ್ಲಿ250ಕ್ಕೂಹೆಚ್ಚಿಗೆ ವಿದ್ಯಾರ್ಥಿಗಳಿಗೆಉಚಿತ ಊಟ-ವಸತಿಯಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣನೀಡಲಾಗುತ್ತಿದೆ.ವಿದ್ಯಾಥಿಗಳುಮಾತೃ ದೇವೋ ಭವ,ಪಿತೃ ದೇವೋ ಭವ,ಆಚಾರ್ಯ ದೇವೋಭವ ಎಂಬ ಮಂತ್ರದ ಜೊತೆಗೆ ರಾಷ್ಟ್ರದೇವೋ ಭವ ಎಂಬ ಮಂತ್ರ ಹೇಳುವುದನ್ನುರೂಢಿಸಿಕೊಳ್ಳಬೇಕು.ದೇಶದಲ್ಲಿ ಯಾವುದೇಸಂಪತ್ತನ್ನಾದರೂ ಕೊಳ್ಳೆ ಹೊಡೆಯಬಹುದುಆದರೆ ಈ ದೇಶದ ದೊಡ್ಡ ಶಕ್ತಿಯಾಗಿರುವಭಕ್ತಿಯನ್ನು ಕದಿಯಲು ಯಾರಿಂದಲೂಸಾಧ್ಯವಿಲ್ಲ.ಅಂತಹ ಭಕ್ತಿ,ಶ್ರದ್ಧೆಯನ್ನುಉದ್ದೀಪನಗೊಳಿಸಲು ಇಂತಹ ಜಾತ್ರೆ,ಉತ್ಸವಗಳು ಅಗತ್ಯ.ಸನಾತನ ಧರ್ಮ,ಸಂಸ್ಕೃತಿಯರಕ್ಷಣೆ ನಮ್ಮೆಲ್ಲ ಮಠಗಳ ಹೊಣೆಎಂದು ಹೇಳಿದರು.
ಸಮಾರಂಭವನ್ನುಉದ್ಘಾಟಿಸಿ ಮಾತನಾಡಿದ ಮಾಜಿಸಚಿವ ಬೈರತಿ ಬಸವರಾಜ್,ಸಮಾಜವನ್ನು,ಸನ್ಮಾರ್ಗದಲ್ಲಿಕೊಂಡೊಯ್ಯಲು ನಮ್ಮ ಮಠ-ಮಾನ್ಯಗಳಪಾತ್ರ ಪ್ರಮುಖವಾಗಿದ್ದು,ವಿಭೂತಿಪುರ ಮಠದಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆಸಂಸ್ಕಾರವನ್ನು ನೀಡಿ ಸನಾತನಸಂಸ್ಕೃತಿಯನ್ನು ಪ್ರಸಾರ ಮಾಡುವಲ್ಲಿಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಸಮಾರಂಭದಲ್ಲಿಎಸಿಪಿ ಡಾ.ಪ್ರಿಯದರ್ಶಿನಿಸಾಣಿಕೊಪ್ಪ ಮತ್ತು ಹಂಸಮಣಿರುದ್ರಬಸವರಾಜ್ ಅವರಿಗೆ ಗುರುರಕ್ಷೆನೀಡಿ ಗೌರವಿಸಲಾಯಿತು.ನೊಣವಿನಕೆರೆಮಠದ ಶ್ರೀ ಡಾ.ಕರಿವೃಷಭದೇಶೀಕೇಂದ್ರಸ್ವಾಮೀಜಿ,ಚಾನುಕೋಟಿ ಮಠದಡಾ.ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ಶಿವಗಂಗೆಯ ಶ್ರೀಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿ ಉಪದೇಶಾಮೃತ ನೀಡಿದರು.ಕೆರೂರು,ಎಮ್ಮಿಗನೂರು,ಗುಳೇದಗುಡ್ಡ,ಚನ್ನಗಿರಿಮತ್ತಿತರ ಮಠಗಳ ಶ್ರೀಗಳುಪಾಲ್ಗೊಂಡಿದ್ದರು.ವಿಧಾನ ಪರಿಷತ್ಸದಸ್ಯ ಪುಟ್ಟಣ್ಣ,ಕೆಪಿಸಿಸಿಕಾರ್ಯದರ್ಶಿ ಡಿ.ಕೆ.ಮೋಹನ್ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿಗಳ ಹಿಂದೆ ಲಾಬಿ ಇರುತ್ತದೆ. ಆದರೆ ವಿಭೂತಿಪುರ ಮಠದಿಂದ ನೀಡಲಾಗಿರುವ ಸುವರ್ಣಶ್ರೀ ಪ್ರಶಸ್ತಿಯ ಹಿಂದೆ ಪ್ರೀತಿ ಇದೆ. ತಮ್ಮ ಮಠದ ಜಾತ್ರೆಯ ಪೂಜೆ ವೇಳೆ ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳ ಹೆಸರಲ್ಲಿ ಸಂಕಲ್ಪ ಮಾಡಿದ ಅಪರೂಪದ ಮಠ ವಿಭೂತಿಪುರ. ಮಠಗಳು ಧರ್ಮ ದೀಕ್ಷೆಯ ಜೊತೆಗೆ ವಿದ್ಯಾರ್ಥಿಗಳಿಗೆ ಸೇವಾ ದೀಕ್ಷೆಯನ್ನು ನೀಡಬೇಕು. ಲೋಕದ ಹಿತ ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕು.