ಕೊಳ್ಳೇಗಾಲ ಪಟ್ಟಣದಲ್ಲಿ ಶನಿವಾರ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಯಾತ್ರೆ ಮೆರವಣಿಗೆ ನಡೆಯಿತು. 
ರಾಜ್ಯ

ಕೊಳ್ಳೇಗಾಲದಲ್ಲಿ ಸುತ್ತೂರು ಜಾತ್ರೆ ಪ್ರಚಾರ ರಥ

ಕೊಳ್ಳೇಗಾಲ: ಪಟ್ಟಣದಲ್ಲಿ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಯಾತ್ರೆ ಮೆರವಣಿಗೆ ಶನಿವಾರ ನಡೆಯಿತು.

ಶುಕ್ರವಾರ ಪಟ್ಟಣದ ಜೆ.ಎಸ್.ಎಸ್. ಕಾಲೇಜು ಆವರಣಕ್ಕೆ ಪ್ರಚಾರ ರಥ ಯಾತ್ರೆ ಆಗಮಿಸಿತು. ಈ ಹಿನ್ನೆಲೆಯಲ್ಲಿ ಮಾರನೇ ದಿನ ಶನಿವಾರ ಅ.ಭಾ.ವೀ. ಲಿ. ಮಹಾಸಭೆ ಗೌರವಧ್ಯಕ್ಷರು ಮತ್ತು ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಪ್ರಚಾರ ರಥದ ಮೆರವಣಿಗೆಗೆ ಚಾಲನೆ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಇದ್ದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಬಳಿಕ ಪ್ರಚಾರ ರಥಕ್ಕೆ ಯಳಂದೂರು ಕಡೆಗೆ ತೆರಳಲು ಬೀಳ್ಕೊಡಲಾಯಿತು.

ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ ಮಾತನಾಡಿ, ಇದೇ ತಿಂಗಳ 15 ರಿಂದ 20 ರವರೆಗೆ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆ ಮ.ಬೆಟ್ಟದಲ್ಲಿ ಚಾಲನೆ ದೊರೆತು, ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲ ನಮ್ಮ ಸಂಘ ಹಾಗೂ ಎಲ್ಲ ಸಮಾಜದ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಯಳಂದೂರು ಕಡೆಗೆ ಬೀಳ್ಕೊಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸತ್ತೂರು ಜಾತ್ರಾ ಮಹೋತ್ಸವಕ್ಕೆ ತೆರಳುವ ಮೂಲಕ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಅಖಿಲ ಭಾರತ ವೀರೇಶ್ವರ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಮಹೇಶ್, ಮಾಜಿ ಅಧ್ಯಕ್ಷ ಎಂ.ಬಸವರಾಜು, ಪದಾಧಿಕಾರಿಗಳಾದ ಜಿ.ನಟರಾಜು, ಕೆಂಪನಪಾಳ್ಯ ಮಂಜುನಾಥ್, ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಕೊಂಗಳಪ್ಪ, ಜಾಗತಿಕ ಲಿಂಗಾಯತ ಸಂಘದ ಅಧ್ಯಕ್ಷ ಬಿಂದು ಲೋಕೇಶ್ , ಮಧುವನಹಳ್ಳಿ ಸುಂದರಪ್ಪ, ಯುಪಿಎಸ್ ಮಹದೇವಸ್ವಾಮಿ, ಗೌಡಹಳ್ಳಿ ಶಿವಕುಮಾರ್, ಅಪ್ಪು ಟೀಮ್ ರಾಜೇಶ್, ಮುಖಂಡ ನಿಶಾಂತ್, ತೋಟೇಶ್, ಮಹದೇವ ಪ್ರಸಾದ್, ದೇವಾಂಗಪೇಟೆ ಅಚ್ಗಾಲ್ ನಾಗರಾಜಯ್ಯ ಇತರರು ಇದ್ದರು.