ಹೊಸಕೋಟೆಯ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶ್ರೀ ಆದಿಜಗದ್ಗುರು ಶಿವರಾತ್ರೇಶ್ವರ ಶಿವಯೋಗಿಗಳ ಪುತ್ಥಳಿಯನ್ನೊತ್ತ ರಥವನ್ನು ತಾಲೂಕಿನ ವೀರಶೈವ ಲಿಂಗಾಯತ ಮುಖಂಡರು ಸ್ವಾಗತಿಸಿ ಪೂಜೆ ಸಲ್ಲಿಸಿದರು. ನಗರ ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್​, ಪ್ರಧಾನ ಕಾರ್ಯದರ್ಶಿ ಪರಮೇಶ್​, ಆರ್ಚಕರ ಸಂಘದ ಅಧ್ಯಕ್ಷ ನಟರಾಜ್​ ಶಾಸ್ತ್ರಿ ಇದ್ದರು. 
ರಾಜ್ಯ

ಜ.15ರಿಂದ ಸುತ್ತೂರು ಜಾತ್ರಾ ಮಹೋತ್ಸವ / HOSAKOTE

ಹೊಸಕೋಟೆ : ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ನಡೆಯಲಿರುವ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಯು ಶನಿವಾರ ಹೊಸಕೋಟೆಗೆ ಆಗಮಿಸಿತು. ತಾಲೂಕಿನ ವೀರಶೈವ&ಲಿಂಗಾಯತ ಸಮುದಾಯದವರು ರಥವನ್ನು ಅದ್ದೂರಿಯಿಂದ ಸ್ವಾಗತಿಸಿ ಶ್ರೀ ಆದಿಜಗದ್ಗುರು ಶಿವರಾತ್ರೇಶ್ವರ ಶಿವಯೋಗಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಜ.15ರಿಂದ 20ರವರೆಗೆ ಮೈಸೂರಿನ ಶ್ರೀ ಕ್ಷೇತ್ರ ಸುತ್ತೂರು ಮಠದಲ್ಲಿ ಜಾತ್ರೆ ನಡೆಯಲಿದೆ.
15ರಂದು ಉತ್ಸವ ಮೂರ್ತಿಗೆ ಗದ್ದುಗೆ ಪೂಜೆ, 16ರಂದು ಹಾಲ್ವಾರಿ ಉತ್ಸವ, ಶ್ರೀ ಸೋಮೇಶ್ವರಸ್ವಾಮಿ ಕುಂಭಾಭಿಷೇಕ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ಸಾಮೂಹಿಕ ವಿವಾಹ, 17ರಂದು ರಥೋತ್ಸವ, 18ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, ಲಕ್ಷದಿಪೋತ್ಸವ, ಶ್ರೀ ಮಹದೇಶ್ವರ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, 19ರಂದು ತೆಪ್ಪೋತ್ಸವ ಹಾಗೂ ಜ.20ರಂದು ಅನ್ನಬ್ರಹ್ಮೋತ್ಸವ ಹಾಗೂ ಉತ್ಸವ ಮೂರ್ತಿ ಶ್ರೀ ಗದ್ದುಗೆ ಪೂಜೆ ಇರಲಿದೆ.
ತಾಲೂಕು ವೀರಶೈವ ಮಹಾಸಭಾ ಉಪಾಧ್ಯಕ್ಷ ಮಧು, ಕಾರ್ಯದರ್ಶಿ ಕುಮಾರ್​, ಮುಖಂಡರಾದ ಮಂಜುನಾಥ್​, ಕಾರ್ತೀಕ್​, ಓರೊಹಳ್ಳಿ ಬಸವರಾಜ್​, ಮೂರ್ತಿ, ಬಸವರಾಜಣ್ಣ, ನಾಗೇಶ್​, ಪ್ರವಿಣ್​ ಹಳ್ಳಿಗೌಡ, ವೀರಶೈವ ಲಿಂಗಾಯತ ಸಂಘಟನೆಗಳ ಸದಸ್ಯರು ಇದ್ದರು.