ಯಳಂದೂದು ಪಟ್ಟಣದ ಎಸ್‌ಬಿಎಂ ವೃತ್ತದಲ್ಲಿ ಶನಿವಾರ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ದುಗ್ಗಹಟ್ಟಿ ವಿ.ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು. ಗೌಡಹಳ್ಳಿ ರವಿ ಇತರರು ಇದ್ದರು.  
ರಾಜ್ಯ

ಯಳಂದೂರು ಭಾಗದಲ್ಲಿ ಸುತ್ತೂರು ಜಾತ್ರೆ ರಥ ಸಂಚಾರ

ಯಳಂದೂರು: ಸುತ್ತೂರಿನಲ್ಲಿ ಜ.15 ರಿಂದ 20 ರವರೆಗೆ 5 ದಿನಗಳ ಜಾತ್ರೆಗೆ ಭಕ್ತರನ್ನು ಆಹ್ವಾನಿಸಲು ಚಾ.ನಗರ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಪ್ರಾಚಾರ ರಥವು ಶನಿವಾರ ಪಟ್ಟಣ ಎಸ್‌ಬಿಎಂ ವೃತ್ತಕ್ಕೆ ಆಗಮಿಸಿತು.

ಈ ವೇಳೆ ಜಿಲ್ಲೆಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ದುಗ್ಗಹಟ್ಟಿ ವಿ.ಮಲ್ಲಿಕಾರ್ಜುನಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸುತ್ತೂರು ಜಾತ್ರೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಳ್ಳಲಿದ್ದು, ಎಲ್ಲ ಕ್ಷೇತ್ರಗಳ ಗಣ್ಯರು ಾತ್ರೆಯಲ್ಲಿ ಭಾಗವಹಿಸುವುದು ವಿಶೇಷ. ಐದು ದಿನ ನಡೆಯುವ ಜಾತ್ರೆ ಮೈಸೂರು ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತದೆ. ಅಲ್ಲದೆ ನಾಡಿನ ಪರಂಪರೆ ಬಿಂಬಿಸುವ ದೇಸೀ ಕ್ರೀಡೆಗಳ ಪ್ರದರ್ಶನ, ಸಾಮೂಹಿಕ ವಿವಾಹ, ಕೃಷಿಮೇಳ, ವಸ್ತು ಪ್ರದರ್ಶನ, ರೈತರಿಗೆ ಕೃಷಿ ಮಾಹಿತಿ ಲಭ್ಯವಾಗುವ ಸಾಕಷ್ಟು ಕಾರ್ಯಕ್ರಮಗಳು ಜರುಗಲಿವೆ. ಇದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆ ಯನ್ನು ಯಶ್ವಿಸಿಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಚಾರ ರಥವು ತಾಲೂಕಿನ ಅಗರ, ಗೌಡಹಳ್ಳಿ, ಮಲಾರಪಾಳ್ಯ, ಚಾಮಲಾಪುರ, ಮೆಲ್ಲಹಳ್ಳಿ, ದುಗ್ಗಹಟ್ಟಿ, ಹೊನ್ನೂರು, ಕೆಸ್ತೂರು ಸೇರಿದಂತೆ ಇತರೆ ತಾಲೂಕಿನ ಗ್ರಾಮಗಳಲ್ಲಿ ಸಂಚರಿಸಿತು.
ಈ ವೇಳೆ ಜಿಲ್ಲಾ ವೀರಶೈವ ಮಹಾಸಭಾದ ಕಾರ್ಯದರ್ಶಿ ಗೌಡಹಳ್ಳಿ ರವಿ, ನಿರ್ದೇಶಕರಾದ ಮಹದೇವಸ್ವಾಮಿ(ಮನು), ತಾಲೂಕು ವೀರಶೈವ ಮಹಾಸಭಾ ಅಧಕ್ಷ ಮಹದೇವಪ್ಪ, ಕಾರ್ಯದರ್ಶಿ ಪ್ರಭು, ಬಿಳಿಗಿರಿರಂಗನಬೆಟ್ಟದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಜಿಲ್ಲಾ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ಕಾರಪುರಮಲ್ಲೇಶ್, ಪಪಂ ನಾಮ ನಿರ್ದೇಶನ ಸದಸ್ಯ ಬಳೇಪೇಟೆ ಲಿಂಗರಾಜುಮೂರ್ತಿ, ಪ.ಪಂ.ಮಾಜಿ ಸದಸ್ಯ ಶ್ರೀನಿವಾಸ್, ಮಾಜಿ ಅಧ್ಯಕ್ಷ ಪುಟ್ಟಸುಬ್ಬಪ್ಪ, ಮೆಲ್ಲಹಳ್ಳಿ ಪುಟ್ಟಣ್ಣ, ನಾಗೇಂದ್ರಸ್ವಾಮಿ, ಭರತ್, ರಾಜಶೇಖರ್, ಷಡಕ್ಷರಿ, ಶಿವಕುಮಾರಸ್ವಾಮಿ, ಮಹದೇವಸ್ವಾಮಿ, ಹೊನ್ನೂರುಮಂಜು, ಸಂತೋಷ್ ಇತರರು ಇದ್ದರು.