Suspicious death of a young man 
ರಾಜ್ಯ

ಯುವಕ ಅನುಮಾನಾಸ್ಪದ ಸಾವು

ಪಟ್ಟಣದ ಬಾಪೂಜಿ ನಗರದ ಬಾಡಿಗೆ ಮನೆಯೊಂದರಲ್ಲಿ ಗುರುವಾರ ಸಂಜೆ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿಯ ನಲ್ಲಕದಿರೇನಹಳ್ಳಿಯ ನಿವಾಸಿ ಮಹೇಶ್​ (28) ಮೃತ.
ಬಾಪೂಜಿ ನಗರದಲ್ಲಿ ಅಕ್ಕನ ಮನೆಗೆ ಬಂದಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಆದರೆ ಮೃತದೇಹ ನೆಲದ ಮೇಲೆ ಮಲಗಿರುವ ರೀತಿಯಲ್ಲಿ ಇರುವುದರಿಂದ ಪೊಲೀಸರಿಗೆ ಅನುಮಾನ ಬಂದು ಬೆರಳಚ್ಚು ತರನ್ನು ಕರೆಸಿ ಪರಿಶೀಲಿಸಿದರು.
ತನಿಖೆ ನಂತರವೇ ಸಾವಿನ ಸತ್ಯಾಸತ್ಯತೆ ತಿಳಿಯಬೇಕಾಗಿದೆ. ಆರಕ್ಷಕ ಉಪ ನಿರೀಕ್ಷಕ ಮುತ್ತುರಾಜ್​ ಹಾಗೂ ಸಿಬ್ಬಂದಿ ಸ್ಥಳಕ್ಕೆ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.