ಅಫಜಲಪುರ ತಾಲೂಕಿನ ಗೌಡಗಾಂವ್​ದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಗುರುವಾರ ಮಲ್ಲಿಕಾರ್ಜುನ ಹಾಗೂ ಶರಣಬಸವೇಶ್ವರ ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಚಾಲನೆ ನೀಡಿದರು. ಶ್ರೀ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ, ರಾಜುಗೌಡ ಪಾಟೀಲ್​ ಇದ್ದರು. 
ರಾಜ್ಯ

ಜೀರ್ಣೋದ್ದಾರದಿಂದ ಪ್ರಾಚಿನ ಪರಂಪರೆ ಉಳಿವು

ಪ್ರಮುಖ ಮುಖ್ಯಾಂಶಗಳು

  • ಅರುಣಕುಮಾರ ಪಾಟೀಲ್​ ಹೇಳಿಕೆ
  • ಗೌಡಗಾಂವ್​ದಲ್ಲಿ ಕಾಮಗಾರಿಗೆ ಚಾಲನೆ
ಅಫಜಲಪುರ: ದೇವಸ್ಥಾನಗಳ ಜೀಣೋರ್ದ್ಧಾರದಿಂದ ಪ್ರಾಚಿನ ಪರಂಪರೆ ಉಳಿಸಿ&ಬೆಳೆಸುವುದರ ಜತೆಗೆ ಸಮಾಜದಲ್ಲಿ ಸಹೋದರತ್ವ ಬೆಳೆಸಲು ಅನುಕೂಲವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯ ಅರುಣಕುಮಾರ ಪಾಟೀಲ್​ ಹೇಳಿದರು.
ಗೌಡಗಾಂವ್​ದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಗುರುವಾರ ಮಲ್ಲಿಕಾರ್ಜುನ ಹಾಗೂ ಶರಣಬಸವೇಶ್ವರ ದೇವಸ್ಥಾನಗಳ ಜೀಣೋರ್ದ್ಧಾರ ಹಾಗೂ ಮಂಗಲ ಕಾರ್ಯಾಲಯ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿ, ಮಂಗಲ ಕಾರ್ಯಾಲಯದಿಂದ ಗ್ರಾಮೀಣ ಭಾಗದ ಜನರ ಕಲ್ಯಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ಬಡದಾಳದ ಚನ್ನಮಲ್ಲೆಶ್ವರ ಮಠವು ಅನ್ನ, ಅರ, ದಾಸೋಹದ ಮೂಲಕ ಬಡ ಮಕ್ಕಳಿಗೆ ಶಿಣ ನೀಡುತ್ತಿದ್ದು, ಮಠದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಪ್ರಮುಖರಾದ ರಾಜುಗೌಡ ಪಾಟೀಲ್​ ಅವರಳ್ಳಿ, ಶರಣು ಪಡಶೆಟ್ಟಿ, ಯಲ್ಲಣ್ಣಗೌಡ ಪಾಟೀಲ್​ ದಣ್ಣೂರ, ದತ್ತು ಜೇಮಶೆಟ್ಟಿ, ರಾಜು ಶೇಗಜಿ, ಪ್ರಕಾಶ ಪಟ್ಟಣ, ಮಹಾಂತ ಜಮಾದಾರ, ಮಲ್ಲಿನಾಥ ಪಾಟೀಲ್​, ಸಂಗಯ್ಯ ಮಠ, ಮಲ್ಲಿನಾಥ ಪಾಟೀಲ್​, ಶಿವುಗೌಡ ಪಾಟೀಲ್​, ಗುರುಕಿರಣ ಪಾಟೀಲ್​, ಗುಂಡು ಪಾಟೀಲ್​, ರಾಜು ಚಿಂಚೋಳಿ, ಗುರುಸಿದ್ದ ಜಮಾದಾರ, ಅಂಬಾರಾಯ ಮುಲಗೆ, ಗಂಗಾಧರ ಸಿನ್ನೂರ, ಮಲಕಯ್ಯ ಮಠಪತಿ, ಮಲ್ಲಿನಾಥ ಮುಲಗೆ ಇತರರಿದ್ದರು.