ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ಸಂಘಟನೆ ಮುಖಂಡರಾದ ಶಶಿಕಾಂತ ಗುರೂಜಿ, ಚೂನಪ್ಪ ಪೂಜಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಿ.ಎಂ.ಐಹೊಳೆ, ಅರುಣ ಐಹೊಳೆ, ಶಿವಾನಂದ ಐಹೊಳೆ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ರಾಯಬಾಗ
ನಾನು ಒಬ್ಬ ರೈತನ ಮಗನಾಗಿದ್ದು, ಗುರ್ಲಾಪುರ ರೈತಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ರೈತರು ನೆಮ್ಮದಿಯಿಂದ ಇರಬೇಕೆಂದರೆ ನಾವೆಲ್ಲ ರೈತರ ಪರ ನಿಲ್ಲಬೇಕು. ರೈತ ಹೋರಾಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ತಂದಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಮಠದಿಂದ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿಗೆ ‘ರೈತ ನಾಯಕ’ ಹಾಗೂ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಅವರಿಗೆ ‘ರೈತ ನಾಯಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಇಬ್ಬರು ರೈತ ಮುಖಂಡರು ರೈತರ ಪರ ಕಾಳಜಿ ಹೊಂದಿದ್ದು ಹೆಮ್ಮೆಯ ವಿಷಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ಮಾತನಾಡಿದರು. ರನ್ನ ಬೆಳಗಲಿಯ ಡಾ.ರಮೇಶಕುಮಾರ ಶಾಸಿ, ಯುವ ಧುರೀಣ ಅರುಣ ಐಹೊಳೆ, ಶಿವಾನಂದ ಐಹೊಳೆ, ಪೃಥ್ವಿರಾಜ ಜಾಧವ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಲಕ್ಕಪ್ಪ ಜೋಡಟ್ಟಿ, ವಿಜಯ ನಾಯಿಕ, ರವಿ ಕುಗ್ಗೇಜಿ, ಮನೋಜ ಮನಗುಳಿ, ನಿಂಗಪ್ಪ ಪಕಾಡಿ, ಸಿದ್ರಾಮ ಪಡಾಳೆ, ಪ್ರಕಾಶ ಕರೆಪ್ಪಗೋಳ ಇತರರಿದ್ದರು.