ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಸರಬರಾಜು ಮಾಡಬೇಕು, ವಿದ್ಯುತ್​ ದೀಪಗಳ ದುರಸ್ತಿಗೆ ಮುಂದಾಗಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿಯಲ್ಲಿ ಯುನಿಟಿ ಆಫ್​ ಮೂಲನಿವಾಸಿ ಬಹುಜನ ಸಂಟನೆ, ವಾಹನ ಚಾಲಕರ ಸಂಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಪಂ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು. ಮಾರುತಿ ಗಂಜಗೇರಿ, ಓಮನರಾವ ಕೊರವಿ, ಮೋಹನ ಐನಾಪುರ, ಮಾರುತಿ ಜಾಧವ್​, ಅಮರನಾಥ ಮೇತ್ರಿ, ಮೈಬೂಬ್​ ಅಲಿ ಇತರರಿದ್ದರು 
ರಾಜ್ಯ

ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಸರಬರಾಜು ಮಾಡಿ

ಪ್ರಮುಖ ಮುಖ್ಯಾಂಶಗಳು

  • ಚಿಂಚೋಳಿಯಲ್ಲಿ ಯುನಿಟಿ ಆಫ್​ ಮೂಲನಿವಾಸಿ ಬಹುಜನ ಸಂಘಟನೆ, ಚಾಲಕರ ಸಂಘದಿಂದ ಹೋರಾಟ
ಚಿಂಚೋಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಯುನಿಟಿ ಆಫ್​ ಮೂಲನಿವಾಸಿ ಬಹುಜನ ಸಂಘಟನೆ ಹಾಗೂ ವಾಹನ ಚಾಲಕರ ಸಂಘಗಳ ನೇತೃತ್ವದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ವೃತ್ತದಿಂದ ಬಸ್​ ಟಕದವರೆಗೆ ಗುರುವಾರ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಮಾರುತಿ ಗಂಜಗೇರಿ ಮಾತನಾಡಿ, ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಅಗತ್ಯ ಮೂಲ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಕನಕಪುರ ಗ್ರಾಪಂ ವ್ಯಾಪ್ತಿಯ ಹೂವಿನಬಾವಿಯಲ್ಲಿ ಜನ ಸಾಮಾನ್ಯರಿಗೆ, ಶಾಲಾ ಮಕ್ಕಳಿಗೆ ಕುಡಿವ ನೀರು ಕಲ್ಪಿಸಬೇಕು. ಹೈಮಾಸ್ಟ್​ ಕಂಬಗಳಿದ್ದರೂ ವಿದ್ಯುತ್​ ಇಲ್ಲದೆ ಕತ್ತಲಲ್ಲಿ ಸಂಚರಿಸುವ ವ್ಯವಸ್ಥೆ ನಿರ್ಮಾಣವಾಗಿದೆ. ತಕ್ಷಣ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೀಘ್ರ ಅತಿಥಿ ಶಿಕ್ಷಕರನ್ನು ನೇಮಕಗೊಳಿಸಬೇಕು ಎಂದು ಆಗ್ರಹಿಸಿದರು.
ತಾಪಂ ಕಚೇರಿಯ ವಿಬಿ-ಜಿ ರಾಮ-ಜಿ ತಾಲೂಕು ಯೋಜನಾಧಿಕಾರಿ ನಾಗೇಂದ್ರಪ್ಪ ಸುಲೇಪೇಟ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಓಮನರಾವ ಕೊರವಿ, ಮೋಹನ ಐನಾಪುರ, ಮಾರುತಿ ಜಾಧವ್​, ಅಮರನಾಥ ಮೇತ್ರಿ, ಮೈಬೂಬ್​ ಅಲಿ, ನೀಲಗಂಗಾ, ಶರಣಮ್ಮ, ಮಂಜುಳಾ, ಶ್ವೇತಾ, ಕವಿತಾ, ಜಗದೇವಿ, ಮಹ್ಮದ್​ ಇಬ್ರಾಹಿಂ, ಕಾಶಿನಾಥ ಇತರರಿದ್ದರು.