ಲೋಕಾಪುರ ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಘಟಪ್ರಭಾ ಬಲದಂಡೆ ಕಾಲುವೆ ನೀರು ಹಂಚಿಕೆ, ಅಕ್ರಮ ತಡೆ ಹಾಗೂ ಸಮಗ್ರ ನಿರ್ವಹಣೆ ಸಭೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರೈತ ಮುಖಂಡ ತಿಮ್ಮಣ್ಣ ಹುಲಸದ, ಲೋಕಣ್ಣ ಕತ್ತಿ, ಪಿಕೆಪಿಎಸ್ ಅಧ್ಯಕ್ಷ ಅರ್ಜುನ ಕೊಪ್ಪದ, ಎ.ಡಿ.ಸಂಗಣ್ಣವರ, ವಿಠ್ಠಲಗೌಡ ಪಾಟೀಲ, ಯಮನಪ್ಪ ಹೊರಟ್ಟಿ, ಆನಂದ ಹವಳಖೋಡ, ರಮೇಶ ದೇವರಡ್ಡಿ ಇತರರಿದ್ದರು.
- ರೈತ ಮುಖಂಡ ತಿಮ್ಮಣ್ಣ ಹುಲಸದ ಆಗ್ರಹ
- ಲೋಕೇಶ್ವರ ದೇವಸ್ಥಾನದಲ್ಲಿ ಸಭೆ
ಲೋಕಾಪುರ: ಘಟಪ್ರಭಾ ಬಲದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಈ ಭಾಗದ ರೈತರಿಗೆ ಹಲವು ವರ್ಷಗಳಿಂದ ಸಮರ್ಪಕ ನೀರು ದೊರೆಯುತ್ತಿಲ್ಲ, ಆದ್ದರಿಂದ ಕಾಲುವೆಯ ಕೊನೆಯ ಭಾಗದವರೆಗೂ ನೀರು ತಲುಪುವಂತೆ ಶಾಶ್ವತ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡ ತಿಮ್ಮಣ್ಣ ಹುಲಸದ
ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಘಟಪ್ರಭಾ ಬಲದಂಡೆ ಕಾಲುವೆ ಜಿ.ಆರ್.ಬಿ.ಸಿ. ನೀರು ಹಂಚಿಕೆ, ಆಕ್ರಮ ತಡೆ ಹಾಗೂ ಸಮಗ್ರ ನಿರ್ವಹಣೆ ಕುರಿತು ಸುಧೀರ್ಘ ಸಭೆಯಲ್ಲಿ ಮಾತನಾಡಿದರು.
ಆ.14ರಂದು ರೈತರು ನಡೆಸಿದ ಹೋರಾಟದ ಪ್ರತಿಲವಾಗಿ, ನೀರಾವರಿ ಇಲಾಖೆಯ ಮೇಲಾಧಿಕಾರಿಗಳು ರೈತರ ಕಾಲುವೆ ನೀರಿನ ಸಮಸ್ಯೆಗಳಿಗೆ ತುರ್ತು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ, ಕಾಲುವೆಯ ನೀರು ಹಂಚಿಕೆಯಲ್ಲಿ ಸಮಾನತೆ ಮೇಲ್ಭಾಗದ ರೈತರಿಗೆ ಮಾತ್ರ ನೀರು ಸಿಗುವ ಪರಿಸ್ಥಿತಿ ತಪ್ಪಿಸಿ, ಕೆಳಭಾಗದ ರೈತರಿಗೂ ನ್ಯಾಯಯುತವಾಗಿ ನೀರು ದೊರೆಯುವಂತೆ ನೀರು ಹಂಚಿಕೆ ವ್ಯವಸ್ಥೆ ರೂಪಿಸಬೇಕು ಎಂದರು.
ಪಿಕೆಪಿಎಸ್ ಅಧ್ಯಕ್ಷ ಅರ್ಜುನ ಕೊಪ್ಪದ, ಮುಖಂಡ ಆನಂದಗೌಡ ಪಾಟೀಲ ಮಾತನಾಡಿ, ನಮಗೆ ಭರವಸೆ ಮಾತ್ರ ಬೇಡ, ಕಾಲುವೆಗೆ ನೀರು ಬೇಕು, ತಾತ್ಕಾಲಿಕ ಪರಿಹಾರ ಮಾತ್ರ ಬೇಡ ಶಾಶ್ವತ ಪರಿಹಾರ ಬೇಕು, ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಆಲಿಸಿ, ಯಾವ ದಿನಾಂಕದೊಳಗೆ ಯಾವ ಕಾಮಗಾರಿ ಕೈಗೊಳ್ಳಲಾಗುತ್ತದೆ.
ಸದಾಶಿವ ಉತ್ತೂರ, ರಾಮನಗೌಡ ಪಾಟೀಲ, ಬಸು ಯಾವಗಲ್, ಪಾಂಡುರಂಗ ಹೂವಣ್ಣವರ, ಗುರುನಾಥ ಪಾಟೀಲ, ಪರಮಾನಂದ ಕನಕಪ್ಪನವರ, ಮಂಜು ಗಸ್ತಿ, ಗೋವಿಂದಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಸದಾಶಿವ ಯಡಹಳ್ಳಿ ಇದ್ದರು.