Sun is the source of health of the world 
ರಾಜ್ಯ

ಜಗತ್ತಿನ ಆರೋಗ್ಯದ ಮೂಲ ಸೂರ್ಯ

ಹುಳಿಯಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀ ಮಾತಾ ಯೋಗ ಕೇಂದ್ರದ ಸಹಯೋಗದೊಂದಿಗೆ ರಥಸಪ್ತಮಿ ಹಾಗೂ ಸ್ವಾತಂತ್ರ$್ಯದ ಅಮೃತ ಮಹೋತ್ಸವದ ಅಂಗವಾಗಿ ಭಾನುವಾರ ವಿಶೇಷ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಧ್ಯಾನನಗರಿಯಲ್ಲಿ ಮುಂಜಾನೆ 5 ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಭಕ್ತಿಯಿಂದ ಅಗ್ನಿಹೋತ್ರ ನೆರವೇರಿಸಿ, ಸತತವಾಗಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂಯೋರ್ಪಾಸನೆ ಮಾಡಿದರು.
ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಶಿಕ್ಷಕ ಬಸವರಾಜು ಮಾತನಾಡಿ, ಸೂರ್ಯನು ಜಗತ್ತಿನ ಆರೋಗ್ಯದ ಮೂಲ. ರಥಸಪ್ತಮಿಯ ದಿನದಂದು ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಪ್ರಭಾವ ಬೀರಲಿದ್ದು, ಈ ಸಮಯದಲ್ಲಿ ಮಾಡುವ ಯೋಗಾಭ್ಯಾಸ ವೈಜ್ಞಾನಿಕವಾಗಿ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು.
ಅಗ್ನಿಹೋತ್ರವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ವಾತಾವರಣವನ್ನು ಶುದ್ಧೀಕರಿಸುವ ಒಂದು ವೈಜ್ಞಾನಿಕ ಪ್ರಕ್ರಿಯೆ. ಸೂಯೋರ್ದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಾಡುವ ಈ ಹೋಮವು ಪರಿಸರದಲ್ಲಿನ ನಕಾರಾತ್ಮಕ ಶಕ್ತಿ ದೂರ ಮಾಡಿ, ಪ್ರಾಣವಾಯುವನ್ನು ವೃದ್ಧಿಸುತ್ತದೆ. ಇನ್ನು ಸೂರ್ಯ ನಮಸ್ಕಾರವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಂಜೀವಿನಿಯಾಗಿದೆ. ಇದು ದೇಹದ ಎಲ್ಲ ಸ್ನಾಯುಗಳಿಗೆ ಚೈತನ್ಯ ನೀಡುವುದಲ್ಲದೆ, ಏಕಾಗ್ರತೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ತಿಳಿಸಿದರು.