ಯಕ್ಷಗಾನ ಪ್ರಸಂಗ 
ರಾಜ್ಯ

ಬೇಸಿಗೆ ಶಿಬಿರ: ಶ್ರೀರಾಮಚಂದ್ರಾಪುರ ಮಠದಲ್ಲಿ ಬಾಲಕಲಾವಿದರಿಂದ ಯಕ್ಷಗಾನ ಪ್ರದರ್ಶನ | Yakshagana

ಬೆಂಗಳೂರು: ಗಿರಿನಗರದಲ್ಲಿರುವ ಶ್ರೀರಾಮಚಂದ್ರಪುರ ಮಠದಲ್ಲಿ ಇತ್ತೀಚೆಗೆ ಕರ್ನಾಟಕ ಕಲಾದರ್ಶಿನಿ(ರಿ) ತಂಡದ ಬೇಸಿಗೆ ಶಿಬಿರದ ಅಂಗವಾಗಿ ಬಾಲಕಲಾವಿದರು ಹಿರಣ್ಯಾಕ್ಷ ವಧೆ- ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ರಾಮಚಂದ್ರಾಪರ ಮಠದ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ, ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗುರು ಶ್ರೀನಿವಾಸ ಸಾಸ್ತಾನ ಅವರು ಪುಟಾಣಿಗಳಿಗೆ ಯಕ್ಷಗಾನ ತರಬೇತಿ ನೀಡಿ, ಈ ಪ್ರಸಂಗವನ್ನು ಆಯೋಜಿಸಿಕೊಟ್ಟರು.
ಯಕ್ಷಗಾನದಲ್ಲಿ ಬಾಲಕಲಾವಿದರಾದ ಶ್ರೇಯಸ್‌ ಸರಳಾಯ, ಧೃತಿ ಅಮ್ಮೆಂಬಳ, ಸೃಷ್ಟಿ ಚೇತನ್‌ ಜಯಂತ, ಆಯುಷ್‌ ಎಸ್‌, ಶ್ರೀವತ್ಸ ಸರಳಾಯ, ಇಶಾನಿ ಎಸ್‌, ಶ್ರೇಷ್ಠಾ ಚೇತನ್‌ ಜಯಂತ, ಕೃತಿ ಅಮ್ಮೆಂಬಳ, ಧನುಶ್‌, ಪರ್ಯಂತ್‌ ಪಾತ್ರಗಳನ್ನು ನಿರ್ವಹಿಸಿದ್ದರು.
ಹಿಮ್ಮೇಳದಲ್ಲಿ ಪ್ರಸನ್ನ ಹೆಗಡೆ (ಭಾಗವತ), ರಘು ಶರ್ಮ (ಮೃದಂಗ) ಮಂಜುನಾಥ ದೇವಾಡಿಗ (ಚೆಂಡೆ) ಭಾಗವಹಿಸಿದ್ದರು. ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಕೆ. ಗೌರಿ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀರಾಮಸೇವಾಸಮತಿ ಅಧ್ಯಕ್ಷ ರಮೇಶ್‌ ಹೆಗಡೆ, ಯಕ್ಷಗಾನ ಕಲಾವಿದ ಸದಾನಂದ ಹೆಗಡೆ, ಯಕ್ಷಗಾನ ಗುರು ಹಾಗೂ ಕರ್ನಾಟಕ ಕಲಾದರ್ಶಿನಿ ತಂಡದ ಮುಖ್ಯಸ್ಥರಾದ ಶ್ರೀನಿವಾಸ ಸಾಸ್ತಾನ, ಕಲಾವಿದ ಮಟ್ಟಿ ರಾಮಚಂದ್ರ ರಾವ್‌ ಮತ್ತಿತರರು ಭಾಗವಹಿಸಿದ್ದರು.