ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ Summer camp
ನರಸಾಪುರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಬರಲು ಬೇಸಿಗೆ ಶಿಬಿರ ಸಹಕಾರಿಯಾಗುತ್ತವೆ. ವೇದಿಕೆಗಳ ಸದುಪಯೋಗ ಪಡೆದುಕೊಂಡು ಕಲಿಕಾ ವಾತಾವರಣ ನಿರ್ಮಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ತಿಳಿಸಿದರು.Summer camp
ತಾಲೂಕಿನ ನರಸಾಪುರದಲ್ಲಿ ಮಂಗಳವಾರ ಕರ್ನಾಟಕ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಅಗಸ ಇಂಟರ್ನ್ಯಾಷನಲ್ ಫೌಂಡೇಷನ್, ಶ್ರೀ ಬೈರೇಗೌಡ ಎಜುಕೇಷನಲ್ ಟ್ರಸ್ಟ್ ಹಾಗೂ ವೇಮಗಲ್ ಕೃಷ್ಣ ಬೈರೇಗೌಡ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಕ್ರಿಯವಾಗಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಉತ್ತಮ ನಾಯಕತ್ವ, ಶಿಸ್ತು, ಸಹಕಾರ, ಸೃಜನಶೀಲತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕಲೆ, ಕ್ರೀಡೆ, ಸಾಹಿತ್ಯ, ಯೋಗ, ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ತರಬೇತಿ ಯಶಸ್ವಿಗೊಳಿಸಬೇಕು ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಡಾ.ಶ್ರೀನಿವಾಸ ಪ್ರಸಾದ್, ಎಂ.ಎನ್.ರುರಾಮ್, ಅಗಸ ಫೌಂಡೇಷನ್ ಶಿಕ್ಷಕರಾದ ಶ್ರಾವಣಿ, ಹೇಮಲತಾ, ಸ್ನೇಹಾ, ಕವಿತಾ, ರಜಿನಿ ಇದ್ದರು.