ಕ್ಯಾತಘಟ್ಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ರಾಜೀವ್, ಬಿ. ಬಸವರಾಜು, ವೆಂಕಟೇಶ್, ಅಜ್ಜಹಳ್ಳಿ ರಾಮಕೃಷ್ಣ, ಗಿರೀಶ್ ಕ್ಯಾತಘಟ್ಟ, ವಿಜಯ್ ಕುಮಾರ್, ಜಯರಾಂ ಇತರರಿದ್ದರು.
- ಶಾಸಕ ಕೆ.ಎಂ.ಉದಯ್
- ಕ್ಯಾತಘಟ್ಟ ಗ್ರಾಮ
ಕೆ.ಎಂ.ದೊಡ್ಡಿ: ಸೂಳೆಕೆರೆ ಕಾಮಗಾರಿ ಅಭಿವೃದ್ಧಿ ಸಹಿಸದವರು ಅಪಪ್ರಚಾರ ಮಾಡುತಿದ್ದು, ರೈತರು ಇದಕ್ಕೆ ಆಸ್ಪದ ನೀಡಬಾರದು. ಸೂಳೆಕೆರೆ ಮಿನಿ ಕನ್ನಂಬಾಡಿ ಕಟ್ಟೆಯ ರೀತಿ ಕಂಗೊಳಿಸಲಿದೆ ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ಏತ ನೀರಾವರಿ ಯೋಜನೆಯ ಚೆಕ್ ಡ್ಯಾಂ, ಹೊಸಕಟ್ಟಡ, ಪಂಪ್ ಮೋಟಾರ್ ರೈಸಿಂಗ್ ಮೆನು ಸೇರಿದಂತೆ ವಿವಿಧ ಅಭಿವೃದ್ಧಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸೂಳೆಕೆರೆ ಕಾಮಗಾರಿ ಅಭಿವೃದ್ಧಿ ಇನ್ನೂ ಮುಗಿದೇ ಇಲ್ಲ. ಪಸ್ತುತ ಶೇ. 40 ಮಾತ್ರ ಕಾಮಗಾರಿ ಮುಗಿದಿದ್ದು, ಉಳಿದ ಕಾಮಗಾರಿ ಮುಗಿಯುವ ಮುನ್ನವೇ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ನಾಲೆಗಳ ಕೆಲಸ ಶೇ.90 ಭಾಗ ಮುಗಿದಿದ್ದು ಅಲ್ಲಲ್ಲಿ ಕೆಲಸ ಬಾಕಿ ಇದ್ದು, ಸದ್ಯದಲ್ಲೇ ಅದೂ ಪೂರ್ಣಗೊಳ್ಳಲಿದೆ. ಕೆಲ ರೈತರು ಅಲ್ಲಲ್ಲಿ ಪೈಪ್ ಹಾಕಿಕೊಳ್ಳುವುದರಿಂದ ಕೊನೆಯ ಭಾಗದ ರೈತರಿಗೆ ತೊಂದರೆಯಾಗುತ್ತದೆ. ಕೊನೇ ಭಾಗದ ರೈತರಿಗೂ ಸರಾಗವಾಗಿ ನೀರು ಒದಗಿಸುವುದೇ ನನ್ನ ಗುರಿ. ನೀರಿಲ್ಲದೆ ರೈತರು ಪರದಾಡುವ ಸ್ಥಿತಿಗೆ ಸಂಪೂರ್ಣ ಮುಕ್ತಿ ನೀಡಲಾಗುವುದು ಎಂದರು.
ಚಿಕ್ಕರಸಿನಕೆರೆ ಹೋಬಳಿಯ ರೈತರ ನೀರಿನ ಬವಣೆ ನೀಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳನ್ನೂ ಹಂತ ಹಂತವಾಗಿ ಅಭಿವೃದ್ಧಿಗೊಳಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ಬಸವರಾಜು, ಭಾರತೀನಗರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಗಿರೀಶ್ ಕ್ಯಾತಘಟ್ಟ, ವಿಜಯ್ ಕುಮಾರ್, ಜಯರಾಂ, ತೊರೆಚಾಕನಹಳ್ಳಿ ಶಂಕರೇಗೌಡ, ಕ್ಯಾತಘಟ್ಟ ಕೃಷ್ಣ, ಪೂಜಾರಿ ಮಹೇಶ್ ಅಜ್ಜಹಳ್ಳಿ ಮನು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ನಾಗರಾಜು, ಬಾಬು ಕೃಷ್ಣದೇವ್, ಪ್ರಶಾಂತ್ ಲಿಂಗಯ್ಯ, ಅವಿನಾಶ್ ಮತ್ತಿತರರು ಇದ್ದರು.