ಯುವಕ ಆತ್ಮಹತ್ಯೆಗೆ ಶರಣು 
ರಾಜ್ಯ

ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವಕ

ಪ್ರಮುಖ ಮುಖ್ಯಾಂಶಗಳು

  • ಹೊಟ್ಟೆ ನೋವು ತಾಳಲಾರದೆ ಯುವಕ ಆತ್ಮಹತ್ಯೆ
  • ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ
  • ಅಜಯ ತಮ್ಮಣ್ಣ ಬೋರಗಲ್ಲಿ ಮೃತ ಯುವಕ
ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ!
ಚಿಕ್ಕೋಡಿ : ಹೊಟ್ಟೆ ನೋವು ತಾಳಲಾರದೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹನುಮಾನ ನಗರ ನಿವಾಸಿ ಅಜಯ ತಮ್ಮಣ್ಣ ಬೋರಗಲ್ಲಿ( 32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮತನೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತನಿಗೆ ಕಳೆದ ನಾಲ್ಕು ವರ್ಷದಿಂದ ಹೊಟ್ಟೆ ನೋವಿನ ತೊಂದರೆ ಇದ್ದು,ಇದರ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಇಲ್ಲ ಪ್ರಯೋಜನವಾಗದೇ ಇದರಿಂದ ಮನನೊಂದ ಯುವಕ ಕಮತನೂರ ಗ್ರಾಮದ ಜಮೀನಲ್ಲಿದ್ದ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.