Suicide due to harassment by maternal family? 
ರಾಜ್ಯ

ತವರು ಮನೆಯ ಕಿರುಕುಳಕ್ಕೆ ಆತ್ಮಹತ್ಯೆ?

ಮುಳಬಾಗಿಲು: ಚೀಕೂರು ಗ್ರಾಮದ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ನೀಡಿದ ದೂರಿನ ಮೇರೆಗೆ ನಂಗಲಿ ಪೊಲೀಸ್​ ಠಾಣೆಯಲ್ಲಿ ಯುಡಿಆರ್​ ದಾಖಲಾಗಿದೆ.

ಕಳೆದ 35 ವರ್ಷದ ಹಿಂದೆ ಮಲ್ಲೇಕುಪ್ಪದ ಸೋಮಶೇಖರರೆಡ್ಡಿ ಎಂಬುವವರೊಂದಿಗೆ ವಿವಾಹವಾಗಿತ್ತು.
ತವರು ಮನೆಯಲ್ಲಿ ಅಣ್ಣ ಸುಬ್ರಮಣಿರೆಡ್ಡಿ ಹಾಗೂ ತಮ್ಮ ಬಾಲಚಂದ್ರ ರೆಡ್ಡಿ ಅವರು ಸುಬ್ಬಲ್ಮಮ್ಮ ಹೆಸರಲ್ಲಿ ಚೆಕ್​ಗಳನ್ನು ಭದ್ರತೆಯಾಗಿ ಪಡೆದು ಸಾಲ ಮಾಡಿದ್ದರು. ಆ ಹಣ ಹಿಂದಿರುಗಿಸುವಂತೆ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡುವಂತೆ ಹಲವು ಬಾರಿ ಸಹೋರದರರಲ್ಲಿ ಕೇಳುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಹಣ ಪಡೆದುಕೊಳ್ಳಲು ಜು.28ರಂದು ಸುಬ್ಬಲ್ಮಮ್ಮ ಅವರು ಚೀಕೂರಿನಲ್ಲಿರುವ ತವರು ಮನೆಗೆ ತೆರಳಿದ್ದರು. ಬಳಿಕ ಶನಿವಾರ ಬೆಳಗ್ಗೆ ಗ್ರಾಮದ ಸಮೀಪದ ಜಮೀನಿನಲ್ಲಿರುವ ಮಾವಿನ ಮರಕ್ಕೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ತವರು ಮನೆಯಲ್ಲಿ ಸಹೋದರರಿಂದ ಕಿರುಕುಳವಾಗುತ್ತಿತ್ತು ಹಾಗೂ ಆ ಕಾರಣದಿಂದಲೇ ಈ ಟನೆ ಸಂಭವಿಸಿರಬಹುದು ಎಂಬ ಅನುಮಾನವನ್ನು ಪತಿ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ.
ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.