ನೇಣು ಬಿಗಿದುಕೊಂಡು ಆತ್ಮಹತ್ಯೆ 
ರಾಜ್ಯ

ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ

ಧರ್ಮರಾಜ ರಾಮನಗೌಡ ಪಾಟೀಲ
ಸೋಮವಾರ ರಾತ್ರಿ ಘಟನೆ ನಡೆದಿದ್ದು, 10 ವರ್ಷಗಳ ಹಿಂದೆ ಮೈಸೂರು ಫೈನಾನ್ಸ್ ಏಜೆನ್ಸಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಹಾವೀರ ಬಳೋಜ 10 ಲಕ್ಷ ರೂ. ಠೇವಣಿ ಇಟ್ಟಿದ್ದರು. ‘ಈಗ ಪೈನಾನ್ಸ್ ಬಂದ್ ಆಗಿದ್ದರೂ ನನ್ನಿನಂದಲೇ ಠೇವಣಿ ಮರುಪಾವತಿಗೆ ನಿತ್ಯ ಒತ್ತಡ ಹಾಕುತ್ತಿದ್ದಾರೆ.
ಠೇವಣಿದಾರ ಮಹಾವೀರ ಬಳೋಜ ಸೇರಿ ಸನ್ಮತಿ ಬಳೋಜ, ತಂಗೆವ್ವ ಬಳೋಜ ಹಾಗೂ ಆನಂದ ಅಕ್ಕೋಳ ನೀಡುತ್ತಿರುವ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಹದೇವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ  ದ್ರೌಪದಿ ನಿಕ್ಕಂ ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ತನಿಖಾಸಹಾಯಕರಾದ ಭೀಮಸೇನ ಮನ್ನಾಪುರ, ಶ್ರೀನಾಥ ಅವಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.