ಬೀದರ್​ನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಅಕ್ಕ ಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದಿಪ್​ ಗುಂಟಿ ಉದ್ಘಾಟಿಸಿದರು. ಶಾರದಾ ಕಲ್ಮಲಕರ್​, ರೂಪಾ ಕೋಟೆಗೌಡರ್​ ಇದ್ದರು 
ರಾಜ್ಯ

ಸತತ ಪ್ರಯತ್ನದಿಂದ ಮಾತ್ರ ಸಾಧನೆ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಅಕ್ಕಪಡೆಯ ಶೈನಿ ಗುಂಟಿ ಅಭಿಮತ
  • ಬೀದರ್​ನಲ್ಲಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ
ಬೀದರ್​: ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಅಕ್ಕ ಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದಿಪ್​ ಗುಂಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಣಾ ಟಕದ ಸಹಯೋಗದಡಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರ ವಿದ್ಯಾರ್ಥಿಗಳ ಸನ್ಮಾನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಣಿಕ ಪ್ರಗತಿಗಾಗಿ ಹಮ್ಮಿಕೊಳ್ಳುವ ಇಂಥ ಕಾರ್ಯಕ್ರಮಗಳು ಕಲಿಕಾ ಸಾಮರ್ಥ್ಯ ಹೆಚ್ಚಿಸುವುದರ ಜತೆ ಶಿಣ ೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪೂರಕವಾಗಿವೆ ಎಂದರು.
ನಾನು ಸಹ ತಂದೆ ಇಲ್ಲದೆ ಬೆಳೆದವಳು. ಜೀವನದಲ್ಲಿ ಬಹಳ ಕಷ್ಟಪಟ್ಟು ಓದಿ ಇಂಜಿನಿಯರಿಂಗ್​ ಮಾಡಿ ಪಿಎಚ್​.ಡಿ ಮಾಡುತ್ತಿದ್ದೇನೆ. ಮನೆಯ ಕಷ್ಟಗಳಿಗೆ ಎದೆಗುಂದದೆ ಮಕ್ಕಳು ಶೈಣಿಕ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀೆ ಜೀವನವನ್ನು ಬದಲಾಯಿಸುವ ಟ್ಟ. ವಿದ್ಯಾರ್ಥಿ ಜೀವನದ ಸಾಧನೆಗೆ ಇದೇ ಮೊದಲ ಮೆಟ್ಟಿಲು. ಕಷ್ಟಪಟ್ಟು ಓದಿದರೆ ಮಾತ್ರ ಮುಂದೆ ಹೋಗಲು ಸಾಧ್ಯ ಎಂದರು.
ಜಿಲ್ಲಾ ಮಕ್ಕಳ ರಣಾಧಿಕಾರಿ ಶಾರದಾ ಎನ್​.ಕಲ್ಮಲಕರ್​ ಮತನಾಡಿದರು. ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕಿ ರೂಪಾ ಎಸ್​. ಕೋಟೆಗೌಡರ್​, ಬಾಲಕಿಯರ ಬಾಲಮಂದಿರದ ಅಧೀಕಿ ಮಹಾನಂದಾ, ಸರ್ಕಾರಿ ವೀಣಾಲಯ ಅಧೀಕಿ ಸುನೀತಾ ರಾಠೋಡ್​ ಇತರರಿದ್ದರು. ಗೌರಿಶಂಕರ ಪರತಾಪುರೆ ನಿರೂಪಣೆ ಮಾಡಿದರು. ಪ್ರಶಾಂತ ಬಿರಾದಾರ್​ ಸ್ವಾಗತಿಸಿದರು. ರುನಾಥ ವಂದಿಸಿದರು. 10ನೇ ಪರೀೆಯಲ್ಲಿ ಉತ್ತೀರ್ಣರಾದ ಆರು ಮಕ್ಕಳಿಗೆ ತಲಾ 2500 ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.