Success is possible with continuous practice.
ತೋವಿನಕೆರೆ: ಮಕ್ಕಳು ಮೊಬೈಲ್ ದಾಸರಾಗದೆ ಸತತ ಅಭ್ಯಾಸ ಮಾಡುವುದರಿಂದ ಕಲಿಕೆಯಲ್ಲಿ ಶ್ರದ್ಧೆ ಮತ್ತು ಏಕಾಗ್ರತೆ ಮಟ್ಟ ಹೆಚ್ಚಾಗುತ್ತದೆ ಎಂದು ಬಿಇಒ ಪೈರೋಜ್ ಬೇಗಂ ಹೇಳಿದರು.
ಕೊರಟಗೆರೆ ತಾಲೂಕಿನ ತೋವಿನಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಏರ್ಪಡಿಸಿದ್ದ ಕಲಿಕಾಹಬ್ಬ ಉದ್ಘಾಟಿಸಿ ಮಾತನಾಡಿ, ಸತತ ಪರಿಶ್ರಮಪಟ್ಟರೆ ಯಾವುದು ಅಸಾಧ್ಯವಲ್ಲ. ಪ್ರತಿ ಮಗು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಲಿಕಾ ಹಬ್ಬದಂತಹ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಉತ್ತಮ ಪ್ರಗತಿ ಸಾಧಿಸಲು ಶಿಕ್ಷಕರು ಶ್ರಮಿಸಬೇಕು ಎಂದು ತೋವಿನಕೆರೆ ಕ್ಲಸ್ಟರ್ನ ಹರೀಶ್ ತಿಳಿಸಿದರು.
ಕಲಿಕಾ ಹಬ್ಬದಲ್ಲಿ ಮಕ್ಕಳು ವೇಷ&ಭೂಷನ ತೊಟ್ಟು, ಕಂಸಾಳೆ, ನೃತ್ಯ, ನಂದಿ ಕುಣಿತಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬಿಆರ್ಪಿ ದೊರೆ, ಇಸಿಒ ಗಿರೀಶ್, ಬಿಆರ್ಸಿ ರುದ್ರೇಶ್, ಮುಖ್ಯಶಿಕ್ಷಕ ಸಿದ್ದಪ್ಪ ಇತರರಿದ್ದರು.