ಉದನೂರ ಹೊರವಲಯದ ಅಪ್ಪಾಜಿ ಗುರುಕುಲ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಗಣ್ಯರಿಗೆ ಅಪ್ಪಾಜಿ ಗುರುಸೇವಾ ಭಾಗ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ರೇವಣಸಿದ್ದ ಶಿವಾಚಾರ್ಯ, ಶಿವಾನಂದ ಖಜೂರ್ಗಿ, ಬಸವೇಶ್ವರ ಹೀರಾ, ರಾಘವೇಂದ್ರ ಭಜಂತ್ರಿ, ಮಹಾದೇವ ಪಾಟೀಲ್, ರಾಜಕುಮಾರ ಉದನೂರ, ಜಯತೀರ್ಥ ಪಾಟೀಲ್ ಇತರರಿದ್ದರು.
- ಶ್ರೀ ರೇವಣಸಿದ್ದ ಶಿವಾಚಾರ್ಯ ನುಡಿ
- ಅಪ್ಪಾಜಿ ಗುರುಕುಲ ಶಾಲೆಯಲ್ಲಿ ಸಾಂಸ್ಕೃತಿಕ ಉತ್ಸವ
- ಕುಣಿದು ಕುಪ್ಪಳಿಸಿದ ಚಿಣ್ಣರು
ಕಲಬುರಗಿ: ನಗರ ಹೊರವಲಯದ ಉದನೂರ ರಸ್ತೆಯ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಉತ್ಸವ ಮತ್ತು ಅಪ್ಪಾಜಿ ಗುರುಸೇವಾ ಭಾಗ್ಯ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿ ಶ್ರೀ ರೇವಣಸಿದ್ದ ಶಿವಾಚಾರ್ಯ ಆಶೀರ್ವಚನ ನೀಡಿ, ನಿರಂತರ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಎಳೆಯ ವಯಸ್ಸಿನಲ್ಲಿ ಓದಿದ್ದು ಬೇಗ ಅರ್ಥವಾಗುತ್ತದೆ ಎಂದು ನುಡಿದರು.
ಪೊಲೀಸ್ ಅಧಿಕಾರಿ ರಾಘವೇಂದ್ರ ಭಜಂತ್ರಿ, ದಿಶಾ ಪಿಯು ಕಾಲೇಜು ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜೂರ್ಗಿ ಮಾತನಾಡಿ, ಪಾಲಕರು, ವಿಶೇಷವಾಗಿ ತಾಯಂದಿರು ಮಕ್ಕಳಿಗೆ ಮೊಬೈಲ್ ಗೀಳಿನಿಂದ ಹೊರತರಬೇಕು. ನಿಮ್ಮನ್ನೇ ಅನುಕರಣೆ ಮಾಡುವ ಮಕ್ಕಳು ಮನೆಯಲ್ಲಿದ್ದಾಗ ನೀವು ಮೊಬೈಲ್ ನೋಡುವುದನ್ನು ಬಿಟ್ಟು ಇತರ ಚಟುವಟಿಕೆ ಮೂಲಕ ಅವರೊಂದಿಗೆ ಕೆಲಹೊತ್ತು ಕಳೆಯಿರಿ ಎಂದು ಕಿವಿಮಾತು ಹೇಳಿದರು.
ಎಸಿಪಿ ಬಸವೇಶ್ವರ ಹೀರಾ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಸೋಮಶೇಖರ ಟೆಂಗಳಿ, ಹಿರಿಯ ಪತ್ರಕರ್ತ ಜಯತೀರ್ಥ ಪಾಟೀಲ್, ರೈತ ಮುಖಂಡ ದಯಾನಂದ ಪಾಟೀಲï, ಮಹಾದೇವ ಪಾಟೀಲï, ಶರಣಬಸಪ್ಪ ಮಾಲಿಪಾಟೀಲï, ಶರಣರಾಜ ಛಪ್ಪರಬಂದಿ, ಶಿವಶಂಕರ ಬಿರಾದಾರ, ಆನಂದ ಲೇಂಗಟಿ, ಧರ್ಮರಾಜ ಮಮದಾಪುರ, ಶಿP್ಷÀಕರಾದ ಅಭಿಲಾಶ ರಾಹುಲï, ಭಾಗ್ಯಶ್ರೀ, ಶಶಿಕಲಾ, ಸಾವಿತ್ರಿ, ಅಶ್ವಿನಿ, ಲತಾ ವೈಷ್ಣವಿ ಇತರರಿದ್ದರು.
ವೈಷ್ಣವಿ ರಾಜಕುಮಾರ ನಿರೂಪಣೆ ಮಾಡಿದರು. ಸಂಸ್ಥೆ ಕಾರ್ಯದರ್ಶಿ ರಾಜಕುಮಾರ ಉದನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ಭಾಗಮ್ಮ ರಾಜಕುಮಾರ ವಂದಿಸಿದರು.
ಶರಣು ಸಲಗರ, ಸಿದ್ಧರಾಮ ಯಾದವಾಡ, ಶ್ರೀಮಂತ ಪಾಟೀಲï ಜಿಡಗಾ, ಅಣ್ಣಪ್ಪ ನಾವಿಯವರಿಗೆ ಅಪ್ಪಾಜಿ ಗುರುಸೇವಾ ಭಾಗ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮತ್ತು ಪಾಲಕರನ್ನು ಸತ್ಕರಿಸಲಾಯಿತು. ಮಕ್ಕಳು ನಡೆಸಿಕೊಟ್ಟ ನೃತ್ಯ, ಸಂಗೀತ, ನಾಟಕ ನೋಡುಗರ ಕಣ್ಮನ ಸೆಳೆಯಿತು.
ಮಕ್ಕಳ ನೆನಪಿನ ಶಕ್ತಿ ಅದ್ಭುತವಾಗಿರುತ್ತದೆ. ಓದುವುದರ ಜತೆಗೆ ಬರೆಯುವುದನ್ನು ರೂಢಿಸಿಕೊಳ್ಳಿ. ಮನೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣಿ. ಪಾಲಕರು ತಮ್ಮ ಮಕ್ಕಳಿಗೆ ಮೊದಲು ಸಂಸ್ಕಾರ ಹೇಳಿಕೊಡಬೇಕು. ಸಂಸ್ಕಾರದಿ0ದ ಮಾತ್ರ ಉತ್ತಮ ನಾಗರಿಕನಾಗಿ ಹೊರಹೊಮ್ಮಲು ಸಾಧ್ಯ.|