ಬಸವಕಲ್ಯಾಣದ ಬಿಇಟಿಯ ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಅನ್ವೇಷಣೆ 2026 ಮಹಾವಿದ್ಯಾಲಯದ ವಾರ್ಷಿಕೋತ್ಸವವನ್ನು ಡಿವೈಎಸ್ಪಿ ಮಡೋಳಪ್ಪ ಪಿ. ಎಸ್​.ಉದ್ಘಾಟಿಸಿದರು. ಮಾಜಿ ಸಚಿವ ಬಸವರಾಜ ಪಾಟೀಲ್​ ಅಟ್ಟೂರ, ಲಿಂಗರಾಜ ಪಾಟೀಲ್​ ಅಟ್ಟೂರ, ಡಾ.ಅಶೋಕಕುಮಾರ ವಣಗೇರಿ, ಡಾ.ಉದಯಕುಮಾರ ಕಲ್ಯಾಣಿ, ಡಾ.ಅರುಣಕುಮಾರ ಎಲಾಲ್​, ಪ್ರೇಮಸಾಗರ ಪಾಟೀಲ್​, ಡಾ. ನಾಗಯ್ಯ ಸ್ವಾಮಿ, ಸ್ವರ್ಣಲತಾ ಹಿರೇಮಠ ಇದ್ದರು. 
ರಾಜ್ಯ

ಕಷ್ಟದ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಅಟ್ಟೂರ ಅಭಿಮತ
  • ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ಬಸವಕಲ್ಯಾಣ: ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿರಂತರ ಪ್ರಯತ್ನದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಬಿಇಟಿ ಅಧ್ಯಕ್ಷರು ಆಗಿರುವ ಮಾಜಿ ಸಚಿವ ಬಸವರಾಜ ಪಾಟೀಲ್​ ಅಟ್ಟೂರ್​ ಹೇಳಿದರು.
ಬಸವಕಲ್ಯಾಣ ಎಜುಕೇಷನಲ್​ ಟ್ರಸ್ಟ್​ (ಬಿಇಟಿ)ನ ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜಿನ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಅನ್ವೇಷಣೆ 2026 ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಷ್ಟದ ಹಾದಿಯಲ್ಲಿ ಯಶಸ್ಸು ದೊರೆಯುತ್ತದೆ. ಹೀಗಾಗಿ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು. ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹುಮನಾಬಾದ್​ ಡಿವೈಎಸ್ಪಿ ಮಡೋಳಪ್ಪ ಮಾತನಾಡಿ, ಪ್ರಾಮಾಣಿಕವಾದ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜಕ್ಕೆ ಸದಾ ಒಳ್ಳೆಯದನ್ನು ಬಯಸುವವರಾಗಿ ಭವ್ಯಭಾರತದ ಆಶಾಕಿರಣರಾಗಬೇಕು. ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಆಗಿರುವ ನನಗೆ, ಕಲಿತ ಕಾಲೇಜಿನಲ್ಲಿಯ ಕಾರ್ಯಕ್ರಮದ ಉದ್ಘಾಟಿಸಲು ಬಂದಿರುವದು ಆನಂದ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಖಜಾಂಚಿ ಲಿಂಗರಾಜ ಪಾಟೀಲ ಅಟ್ಟೂರ. ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್​ ಕಾಲೇಜಿನ ಪ್ರಾಚಾರ್ಯ ಡಾ.ಉದಯಕುಮಾರ ಕಲ್ಯಾಣಿ ಮಾತನಾಡಿದರು.
ನಿರ್ದೇಶಕ ಡಾ. ಅಶೋಕಕುಮಾರ ವಣಗೇರಿ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಚಾರ್ಯ ಡಾ.ಅರುಣಕುಮಾರ ಎಲಾಲ್​, ಕುಲಸಚಿವ ಪ್ರೇಮಸಾಗರ ಪಾಟೀಲ್​, ಬಸವಕಲ್ಯಾಣ ಬಿಇಡಿ ಕಾಲೇಜು ಪ್ರಾಚಾರ್ಯ ಡಾ.ನಾಗಯ್ಯ ಸ್ವಾಮಿ, ಸಿಎಸ್​ ವಿಭಾಗದ ಎಚ್​ಒಡಿ ಸ್ವರ್ಣಲತಾ ಹಿರೇಮಠ ಇತರರಿದ್ದರು. ವಿದ್ಯಾಸಾಗರ ಮುಲ್ಗೆ ನಿರೂಪಣೆ ಮಾಡಿದರು. ಡಾ. ಅನೀಲಕುಮಾರ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್​ ಮತ್ತು ಬಿಇಡಿ ಪರಿೆಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಗಿದೆ. ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ನಡೆಯಿತು.