ನೆಲಮಂಗಲದ ಜಕ್ಕಸಂದ್ರ ಹೊಯ್ಸಳ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಇಇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಶಿರಡಿ ಸಾಯಿ ಎಜುಕೇಷನ್​ ಟ್ರಸ್ಟ್​ ಅಧ್ಯಕ್ಷ ಡಾ.ಟಿ.ರಾಮಕೃಷ್ಣಪ್ಪ, ಎಚ್​.ಆರ್​.ಗೋಪಾಲ್​, ಇ.ಚಿದಾನಂದಗೌಡ,ಉಪನ್ಯಾಸಕರಾದ ಪೂರ್ಣಿಮಾ, ಗೀತಾ, ಹರೀಶ್​, ಮಹದೇವಪ್ಪಗೌಡ ಮತ್ತಿತರರು ಇದ್ದರು.  
ರಾಜ್ಯ

ನಿರಂತರ ಪ್ರಯತ್ನದಿಂದ ಯಶಸ್ಸು ಪ್ರಾಪ್ತಿ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ಶ್ರದ್ಧೆ ಮತ್ತು ಪರಿಶ್ರಮ ಇದ್ದರೆ ಯಶಸ್ಸಿನ ದಾರಿ ಸುಲಭವಾಗುತ್ತದೆ ಎಂದು ಶ್ರೀ ಶಿರಡಿ ಸಾಯಿ ಎಜುಕೇಷನ್​ ಟ್ರಸ್ಟ್​ ಅಧ್ಯಕ್ಷ ಡಾ.ಟಿ.ರಾಮಕೃಷ್ಣಪ್ಪ ತಿಳಿಸಿದರು. 
ನಗರಸಭೆ ವ್ಯಾಪ್ತಿಯ ಜಕ್ಕಸಂದ್ರದ ಹೊಯ್ಸಳ ಪದವಿಪೂರ್ವ ಕಾಲೇಜಿ ಆವರಣದಲ್ಲಿ ಮಂಗಳವಾರ ಕಾಲೇಜು ಆಡಳಿತ ಮಂಡಳಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಇಇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳು ನಿರಂತರವಾಗಿ ಜೆಇಇ ಹಾಗೂ ನೀಟ್​ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದು, ಮಕ್ಕಳ ಸಾಧನೆಗೆ ಪೂರಕವಾಗಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದರು.
ಪ್ರಾಂಶುಪಾಲ ಕೆ.ವಿ.ಗೌರಿಶಂಕರ್​ ಮಾತನಾಡಿ, ಜೆಇಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡ ವಿದ್ಯಾರ್ಥಿಗಳು ಎನ್​ಐಟಿ, ಐಐಟಿ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಗ್ರಾಮೀಣಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲು ಅವಶ್ಯವಿರುವ ತರಬೇತಿ ಜತೆಗೆ ಶ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಉದ್ದೇಶದಿಂದ ಇಂಜಿನಿಯರಿಂಗ್​ ಶಿಕ್ಷಣ ಪಡೆದುಕೊಳ್ಳಲು ಆಸಕ್ತಿ ಇರುವ ದ್ವೀತಿಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭದಿಂದಲೇ ವಿಶೇಷ ಜೆಇಇ ಪರೀಕ್ಷೆಗೆ ಬೇಕಾದ ತರಬೇತಿಯನ್ನು 3 ತಿಂಗಳ ಕಾಲ ನೀಡಲಾಗುತ್ತಿದೆ. ಇದರೊಂದಿಗೆ ವೈದ್ಯಕಿಯ ಶಿಕ್ಷಣಕ್ಕೂ ಅವಶ್ಯವಿರುವ ನೀಟ್​ ಪರೀಕ್ಷೆ ತರಬೇತಿ ನೀಡಲಾಗುವುದು ಎಂದರು. 
ಹೊಯ್ಸಳ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಚ್​.ಆರ್​.ಗೋಪಾಲ್​, ಹೊಯ್ಸಳ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಇ.ಚಿದಾನಂದಗೌಡ, ಉಪನ್ಯಾಸಕರಾದ ಪೂರ್ಣಿಮಾ, ಗೀತಾ, ಹರೀಶ್​, ಮಹದೇವಪ್ಪಗೌಡ, ಶೀಧರ್​, ಕಿಶೋರ್​, ಕರುಣಾಕರ್​, ನರೇಶ್​, ಶಶಿಧರ್​, ರಾಕೇಶ್​, ಐಶ್ವರ್ಯಶೆಟ್ಟಿ, ಹರ್ಷಿತಾ, ಅಶ್ವಿನಿ, ಸುಜಾತಾ, ಸುಷ್ಮಾ, ಛಾಯರಾಣಿ, ವರ್ಷಿತಾ, ಮೋನಿಕಾ, ಗಾಯತ್ರಿ, ಸುವರ್ಣಾ ಮತ್ತಿತರರು ಇದ್ದರು. 
ಐವರಿಗೆ ಶೇ.90ಕ್ಕಿಂತ ಹೆಚ್ಚು ಅಂಕ : ಇತ್ತೀಚೆಗೆ ಆಯೋಜಿಸಿದ್ದ ಜೆಇಇ ಪರೀೆಯಲ್ಲಿ ಕಾಲೇಜಿನ ದರ್ಶನ್​ಮಂಜುನಾಥ್​ಗೌಡ ಶೇ.99.03, ಪ್ರಜ್ವಲ್​ಗೌಡ  ಶೇ.91 ಸೇರಿದಂತೆ 5 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದಾರೆ.