ಸೇಡಂ ತಾಲೂಕಿನ ಮುಗನೂರ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಯಲ್ಲಾಲಿಂಗ ಮಹಾರಾಜರ ಪ್ರವಚನ ಕಾರ್ಯಕ್ರಮದಲ್ಲಿ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಅವರ ತುಲಾಭಾರ ಜರುಗಿತು.
- ಜಿಡಗಾ ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ನುಡಿ
- ಮುಗುನೂರದಲ್ಲಿ ಸದಾಶಿವ ಸ್ವಾಮೀಜಿ ತುಲಾಭಾರ
ಸೇಡಂ: ಸಮಾಜದಲ್ಲಿರುವ ನಾವು ಧರ್ಮದ ತಳಹದಿ ಮೇಲೆ ಬದುಕು ನಡೆಸಿದರೆ ನಿರೀತ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ಜಿಡಗಾ&ಮುಗಳಖೋಡ ಮಠದ ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ನುಡಿದರು.
ಮುಗನೂರ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಯಲ್ಲಾಲಿಂಗರ ಪ್ರವಚನ ಮಂಗಲ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಧರ್ಮ ಎಂಬ ಪದ ನಮ್ಮ ಸಂಸತಿ, ಸಂಸ್ಕಾರ ಕಲಿಸಿಕೊಡುತ್ತದೆ, ಅಧುನಿಕತೆ ನೆಪದಲ್ಲಿ ತಂದೆ&ತಾಯಿಗಳು ಮಕ್ಕಳಿಗೆ ನಮ್ಮಇತಿಹಾಸ ತಿಳಿಸುವ ಕೆಲಸ ಮಾಡುತ್ತಿಲ್ಲ. ಸಂಸ್ಕಾರ ಕಲಿಸಿಕೊಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮುಗನೂರ ಗ್ರಾಮಸ್ಥರು ಯಾವತ್ತಿಗೂ ಭಕ್ತಿ ಮೈಗೂಡಿಸಿಕೊಂಡು ಬಂದಿರುವವರು. ಧರ್ಮ ಕಾರ್ಯದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅಂತಲೇ ಊರಲ್ಲಿ ಯಲ್ಲಾಲಿಂಗರ ಪುರಾಣ ನಡೆಸಿದ್ದಾರೆ ಎಂದರು.
ಭಕ್ತಿಭಾವದಿಂದ ತುಲಾಭಾರ ಸೇವೆ ಸಲ್ಲಿಸಿರುವ ಗ್ರಾಮಸ್ಥರ ಧಾರ್ಮಿಕ ನಿಷ್ಠೆ ಮತ್ತು ಗುರುಭಕ್ತಿ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದ ಅವರು, ಅಕ್ಕಮಹಾದೇವಿ ದೇಗುಲದ ಜೀಣೋರ್ದ್ಧಾರಕ್ಕಾಗಿ 21 ಸಾವಿರ ರೂ. ದೇಣಿಗೆ ನೀಡಿದರು.
ಪ್ರಮುಖರಾದ ಸಿದ್ದಪ್ಪ ಪಾಟೀಲ್, ಜಗನ್ನಾಥ ತವಧಿ, ನರಸಪ್ಪ ಪೂಜಾರಿ, ಚಂದ್ರಕಾಂತ ಪಾಟೀಲ್, ಮಾಳಪ್ಪ ಪೂಜಾರಿ, ರಾಚಪ್ಪಾ ರಾಗ, ಬಸವರಾಜ ಸಕ್ರಿ, ನೀಲಕಂಠ ಪರದೇಶಿ, ವಿಜಯಲ$್ಮ ಪಾಟೀಲ್, ಲ$್ಮಬಾಯಿ ಸಾಲೋಳ್ಳಿ, ಜಗದೇವಿ ತವಧಿ, ಅನ್ನಪೂರ್ಣ ಜಮಗಿ, ಚನ್ನಮ್ಮ ಪಾಟೀಲ್, ಶಕುಂತಲಾ ಸಕ್ರಿ, ಮೊನ್ನೆಮ್ಮಾ ಗುತ್ತೇದಾರ್, ನಿರ್ಮಲಾ ಆಂದೇಲಿ, ಮಹಾದೇವಿ ಕೊಳ್ಳಿ ಇತರರಿದ್ದರು. ಶ್ರೀ ಅನ್ನದಾನೇಶ್ವರ ಶಾಸ್ತ್ರಿಗಳು ಒಂದು ವಾರ ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜ ಕುರಿತು ಪ್ರವಚನ ನಡೆಸಿಕೊಟ್ಟರು.