ಬಸವಕಲ್ಯಾಣದ ಎಸ್ಎಸ್ಕೆ ಬಸವೇಶ್ವರ ಕಾಲೇಜಿನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ವಿಜಯಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ನಾಗರಾಳೆ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್, ಪ್ರೊ.ಆರ್ಡಿ ಬಾಲಿಕಿಲೆ, ಸುರೇಶ ಎಚ್.ಆರ್., ಶಶಿಧರ್ ಪಾಟೀಲ್, ವಿಠೋಬಾ ಡೊಣ್ಣೆಗೌಡರ ಇದ್ದರು.
- ನ್ಯಾಯಾಧೀಶ ಮಹೇಶ ನಾಗರಾಳೆ ಅಭಿಮತ
- ಎಸ್ಎಸ್ಕೆಬಿ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ
ಬಸವಕಲ್ಯಾಣ: ಜೀವನದಲ್ಲಿ ಯಶಸ್ಸಿಗೆ ಕಠಿಣ ಪರಿಶ್ರಮ ಒಂದೇ ದಾರಿಯಾಗಿದೆ. ಜೀವನದಲ್ಲಿ ಒಮ್ಮೊಮ್ಮೆ ಎದುರಾಗುವ ಹಿನ್ನಡೆ, ಸೋಲು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಆಗುವವರೆಗೂ ನಿರಂತರ ಪ್ರಯತ್ನ ಮಾಡಬೇಕು ಎಂದು ವಿಜಯಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ನಾಗರಾಳೆ ಹೇಳಿದರು.
ನಗರದ ಎಸ್ಎಸ್ಕೆ .ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಬಿಸಿಎ ನಿಕಾಯದ ಆರನೇ ಸೆಮ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಯ ಮತ್ತು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಎಐ ಬಂದಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಗುರಿ ತಲುಪಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಎಸ್ಕೆಬಿ ಕಾಲೇಜು ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಬಹಳಷ್ಟು ಸ್ಪರ್ಧೆಗಳಿರುವುದರಿಂದ ವಿದ್ಯಾರ್ಥಿಗಳು ಅತ್ಯುತ್ತಮ ಕೌಶಲ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಬೇಕು. ತಮ್ಮ ತಂದೆ&ತಾಯಿ, ಸಮಾಜ ಮತ್ತು ಮಹಾವಿದ್ಯಾಲಯಕ್ಕೆ ಕೀರ್ತಿ ತರುವಲ್ಲಿ ತಮ್ಮ ಕಠಿಣ ಪರಿಶ್ರಮ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಪ್ರೊ.ಆರ್ಡಿ ಬಾಲಿಕಿಲೆ ಮತನಾಡಿ, ಉದ್ಯೋಗ ಅವಕಾಧಕ್ಕೆ ಪದವಿಯಷ್ಟೇ ಸಾಲದು, ಕೌಶಲ ಬೇಕು. ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಂಡು ಕಠಿಣ ಪರಿಶ್ರಮದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್ಎಸ್ಎಸ್ ಅಧಿಕಾರಿ ಸುರೇಶ್ ಎಚ್.ಆರ್., ಬಿಸಿಎ ಮುಖ್ಯಸ್ಥ ಶಶಿಧರ್ ಪಾಟೀಲ್, ವಿಠೋಬಾ ಡೊಣ್ಣೆಗೌಡರ, ಮಹಾದೇವ ದೇಗಾಂವ, ಡಾ.ಮಲ್ಲಿಕಾರ್ಜುನ, ದೀಪಕ ಕಾಡಾದಿ, ಜ್ಯೋತಿ ಎಂ., ಸಾ ಬಾಲಕಿಲೆ, ವಿವೇಕ ಮಾಳಿ, ಇಂದ್ರಜಿತರಡ್ಡಿ, ಶಿವಶಂಕರ, ಪಾರ್ವತಿ ತಾಂಬೋಳೆ ಇತರರಿದ್ದರು. ಭಾಗ್ಯಶ್ರೀ ಸ್ವಾಗತಿಸಿದರು. ಋತಿಕಾ ವಂದಿಸಿದರು. ಸೋನಾಲಿ ಮತ್ತು ಪ್ರೀತಿ ನಿರೂಪಣೆ ಮಾಡಿದರು. ವಿಜಯಲಕ್ಷಿ$್ಮ ಪ್ರಾರ್ಥನ ಗೀತೆ ಹಾಡಿದರು
"
ವಿದ್ಯಾರ್ಥಿಗಳಾಗಿ ಕಾಲೇಜಿಗೆ ಸೇರಿದವರು ಪದವಿ ಪಡೆದು ಪ್ರಭುದ್ಧರಾಗಿ ಹೊರ ಹೋಗುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಭವಿಷ್ಯ ರೂಪಿಗೊಳ್ಳಬೇಕಿದೆ. ಜೀವನದಲ್ಲಿ ಯಶಸ್ವಿಯಾಗಬೇಕಿದೆ. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕಂಡ ಕನಸು ಸಾಕಾರಗೊಳಿಸಬೇಕಿದೆ. ಮನೆಗೂ, ಕಲಿಸಿದ ಗುರುಗಳಿಗೂ, ಕಲಿತ ಶಾಲಾ&ಕಾಲೇಜಿಗೂ ಮತ್ತು ಗ್ರಾಮಕ್ಕೂ ಗೌರವ ತರಬೇಕಿದೆ ಎನ್ನುವದನ್ನು ಮರೆಯಬಾರದು
— ಮಹೇಶ ನಾಗರಾಳೆ ಹಿರಿಯ ಸಿವಿಲ್ ನ್ಯಾಯಾಧೀಶರು ವಿಜಯಪುರ