ಶಹಾಪುರ ಮತೇತ್ರ ವ್ಯಾಪ್ತಿಯಲ್ಲಿನ ದೇವಸ್ಥಾನ ಹಾಗೂ ಮಠಮಾನ್ಯಗಳ ಬಾಕಿ ಉಳಿದ ಅನುದಾನದ ಕಟ್ಟಡ ನಿರ್ಮಾಣದ ಕಾಮಗಾರಿ ಚೆಕ್ನ್ನು ಮಂಗಳವಾರ ಶಾಸಕ ಶರಣಬಸಪ್ಪ ದರ್ಶನಾಪುರ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಆಶ್ರಯ ಕಮಿಟಿ ಅಧ್ಯಕ್ಷ ವಸಂತಕುಮಾರ ಇತರರಿದ್ದರು.
- ಮಾಜಿ ಸಚಿವ ದರ್ಶನಾಪುರ ಹೇಳಿಕೆ
- ಮಠ-ಮಂದಿರಗಳಿಗೆ ಬಾಕಿ ಅನುದಾನದ ಚೆಕ್ ವಿತರಣೆ
ಶಹಾಪುರ: ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಈ ಮೂರು ವರ್ಷಗಳ ಅವಧಿಯಲ್ಲಿ, ಸಚಿವರಾಗಿ ಕಾರ್ಯ ನಿರ್ವಹಿಸಿದ ತಾವು, ಮತೇತ್ರದ ವ್ಯಾಪ್ತಿಯಲ್ಲಿ ಮಠ ಮಂದಿರಗಳ ಜೀಣೋರ್ದ್ಧಾರಕ್ಕೆ ಮತ್ತು ನೂತನ ಕಟ್ಟಡಕ್ಕೆ ಹೆಚ್ಚಿನ ಅನುದಾನ ತಂದು ನೀಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಮಂಗಳವಾರ ಇಲ್ಲಿ ವಿವಿಧ ಮಠ&ಮಂದಿರಿಗಳಿಗೆ ಬಾಕಿ ಉಳಿದ ಅನುದಾನದ ಚೆಕ್ಗಳನ್ನು ವಿತರಿಸಿ ಮಾತನಾಡಿದ ಅವರು, 25 ಮಠ ಮಂದಿರಗಳಿಗೆ ಬಾಕಿ ಉಳಿದ ಅನುದಾನವನ್ನು ಚೆಕ್ ಮೂಲಕ ನೀಡಲಾಗಿದೆ. ಅದರಲ್ಲಿ ಗುಣಮಟ್ಟದ ಕೆಲಸ ಮಾಡುವ ಮೂಲಕ ಅವುಗಳು ಭಕ್ತರ ಆಕರ್ಷಣೆ ಕೇಂದ್ರಗಳಾಗಬೇಕು ಎಂದರು.
ಹೊಸಕೇರದ ಬೀರಲಿಂಗೇಶ್ವರ ದೇವಸ್ಥಾನಕ್ಕೆ 10 ಲಕ್ಷ ರೂ, ದರ್ಶನಾಪುರದ ಹನುಮಾನ ದೇವಸ್ಥಾನಕ್ಕೆ 15 ಲಕ್ಷ ರೂ, ಹೂವಿನಹಳ್ಳಿಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ 10 ಲಕ್ಷ ರೂ, ಇಟಗಾ.ಎಸ್ ದ್ಯಾವಮ್ಮ ದೇವಸ್ಥಾನಕ್ಕೆ 10 ಲಕ್ಷ ರೂ, ನಗನೂರಿನ ನಗರೇಶ್ವರ ದೇವಸ್ಥಾನಕ್ಕೆ 10 ಲಕ್ಷ ರೂ, ಗೋಗಿ.ಪಿ ಶಾಂತ ಶಿವಯೋಗಿ ಮಠಕ್ಕೆ 15 ಲಕ್ಷ ರೂ, ಬನದೇಶ್ವರ ದೇವಸ್ಥಾನ ಶಹಾಪುರ 5 ಲಕ್ಷ, ಉಕ್ಕಿನಾಳದ ದ್ಯಾವಮ್ಮ ದೇವಸ್ಥಾನಕ್ಕೆ 5 ಲಕ್ಷ ರೂ, ನಾಗನಟಿಯ ಬೀರಲಿಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ, ಚಂದಾಪುರದ ಬೀರಲಿಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ, ಚಂದಾಪುರದ ಮರೆಮ್ಮ ದೇವಸ್ಥಾನಕ್ಕೆ 10ಲಕ್ಷ ರೂ, ರಾಜಾಪುರದ ಲಿಂಗಯ್ಯ ದೇವಸ್ಥಾನಕ್ಕೆ 10 ಲಕ್ಷ ರೂ, ಮಲ್ಲಾ.ಬಿ ಕ್ರಾಸ್ ಮಲ್ಲಿಕಾರ್ಜುನ ದೇವಸ್ಥಾನಕ್ಕೆ 20 ಲಕ್ಷ ರೂ, ಮಲ್ಲಾ.ಕೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ 20 ಲಕ್ಷ ರೂ, ಕಿರದಳ್ಳಿ ಪೌರಾದೇವಿ ದೇವಸ್ಥಾನಕ್ಕೆ 5 ಲಕ್ಷ ರೂ, ಮಲ್ಲಾ.ಬಿ ಹನುಮಾನ್ ದೇವಸ್ಥಾನಕ್ಕೆ 20 ಲಕ್ಷ ರೂ, ರಾಕಮಗೇರಿ ಶಹಾಪುರ ವಗ್ಗರಾಯಣ್ಣ ದೇವಸ್ಥಾನ 20 ಲಕ್ಷ ರೂ, ನಡಕೂರು ಸಿದ್ದಾರೂಢ ಮಠಕ್ಕೆ 20 ಲಕ್ಷ ರೂ ಹೀಗೆ ಒಟ್ಟು 2.15 ಲಕ್ಷ ಅನುದಾನ ಪೂರ್ಣ ಪ್ರಮಾಣ ನೀಡಲಾಗಿದೆ ಎಂದು ಶಾಸಕರು ಹೇಳಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಆಶ್ರಯ ಕಮಿಟಿಯ ಅಧ್ಯಕ್ಷ ವಸಂತಕುಮಾರ ಸುರಪುರ ಇತರರಿದ್ದರು.