ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ  
ರಾಜ್ಯ

ಸುರಭಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಸ್ಥೆಯ ಪರಿಶೀಲನಾ ವರದಿ ಸಲ್ಲಿಸಿ: ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಆದೇಶ- Surabhi Souharda Credit Cooperative Society

ಬೆಂಗಳೂರು: ಸುರಭಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಸ್ಥೆಯ 2025-26ನೇ ಸಾಲಿನ ಲೆಕ್ಕಪುಸ್ತಕಗಳ ಮರು ಲೆಕ್ಕಪರಿಶೋಧನೆ ನಡೆಸಿ ಮೂರು ದಿನದೊಳಗೆ ಪರಿಶೀಲನಾ ವರದಿ ಸಲ್ಲಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ. 

ಠೇವಣಿದಾರರ ಹಿತದೃಷ್ಟಿಯಿಂದ ಸುರಭಿ ಸೌಹಾರ್ದ ಕ್ರೆಡಿಟ್ ಸಹಕಾರಿಯ ಲೆಕ್ಕಪುಸ್ತಕಗಳನ್ನು ಮರುಲೆಕ್ಕಪರಿಶೋಧನೆಗೆ ಒಳಪಡಿಸುವಂತೆ ಸಂಸ್ಥೆಯ ನಿರ್ದೇಶಕ ಟಿ.ಕೆ. ತಿಮ್ಮರಾಜು ಶೆಟ್ಟಿ ದೂರು ನೀಡಿದ್ದಾರೆ. ದೂರು ಅರ್ಜಿಯಲ್ಲಿ ನೀಡಲಾಗಿರುವ ಅಂಶಗಳ ಬಗ್ಗೆ ಸಹಕಾರಿ ಸಂಸ್ಥೆಗೆ ಭೇಟಿ ನೀಡಿ ದೂರುದಾರರಿಂದ ಅಧಿಕೃತ ದಾಖಲಾತಿಗಳೊಂದಿಗೆ ಸಮಜಾಯಿಷಿ ಪಡೆದು, ಸಹಕಾರಿಯ ದಾಖಲಾತಿಗಳು ಹಾಗೂ ಲೆಕ್ಕಪರಿಶೋಧನಾ ವರದಿಯೊಂದಿಗೆ ಪರಿಶೀಲಿಸಲು ಸೂಚಿಸಲಾಗಿತ್ತು. 

ಮರುಲೆಕ್ಕಪರಿಶೋಧನೆಯ ಅಗತ್ಯತೆ ಬಗ್ಗೆ ಕಂಡಿಕೆವಾರು ಸ್ಪಷ್ಟ ಅಭಿಪ್ರಾಯ ಒಳಗೊಂಡ ವರದಿಯನ್ನು ನೀಡುವಂತೆ ಈಗಾಗಲೇ ಇಲಾಖೆಯ ಸುತ್ತೋಲೆ ಮೂಲಕ ಸೂಚಿಸಲಾಗಿತ್ತು. ಹಾಗಾಗಿ, ಸಂಸ್ಥೆಯ ಹಣದ ಅವ್ಯಹಾರದ 

ಗಂಭೀರತೆ ಪರಿಗಣಿಸಿ ವಿಳಂಬ ಮಾಡದೇ 3 ದಿನದೊಳಗೆ ಪರಿಶೀಲನಾ ವರದಿಯನ್ನು ಇಲಾಖೆಗೆ ಸಲ್ಲಿಸುವಂತೆ ನಿರ್ದೇಶಕರು, ಜಂಟಿ ನಿರ್ದೇಶಕರಿಗೆ ತಾಕೀತು ಮಾಡಿದ್ದಾರೆ.