ಚಿತ್ತಾಪುರದಲ್ಲಿ ಜಿಲ್ಲಾ ಉಸ್ತುವಾರ ಸಚಿವ ಪ್ರಿಯಾಂಕ್​ ರ್ಖಗೆ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ ಮಂಗಳವಾರ ಜರುಗಿತು. ತಿಪ್ಪಣ್ಣಪ್ಪ ಕಮಕನೂರ, ಫೌಜಿಯಾ ತರನ್ನುಮ್​, ಭಂವರಸಿಂಗ್​ ಮೀನಾ, ಅಡ್ಡೂರು ಶ್ರೀನಿವಾಸುಲು ಇದ್ದರು. 
ರಾಜ್ಯ

ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರಸ್ತಾವನೆ ಸಲ್ಲಿಸಲು ಸಚಿವ ಪ್ರಿಯಾಂಕ್​ ಖರ್ಗೆ ಸೂಚನೆ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರದಲ್ಲಿ ಪ್ರಗತಿ ಪರಿಶೀಲನಾ ಸಭೆ
 ಚಿತ್ತಾಪುರ: ಸರ್ಕಾರದಲ್ಲಿ ಅನುದಾನ, ಮಾನವ ಸಂಪನ್ಮೂಲ ಎಲ್ಲವೂ ಇದೆ. ಆದರೆ ಮತಕ್ಷೇತ್ರದ ಅಭಿವೃದ್ಧಿಗಾಗಿ ತಾಲೂಕಿನ ಅಧಿಕಾರಿಗಳು ಸಮರ್ಪಕ ಪ್ರಸ್ತಾವನೆ ಕೂಡಲೇ ಸಲ್ಲಿಸಬೇಕು. ಈ ವರ್ಷದ ಬಜೆಟ್​ನಲ್ಲಿ ಅನುದಾನ ಪಡೆದುಕೊಂಡು ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್​ರಾಜ್​ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಪ್ರಿಯಾಂಕ್​ ಖರ್ಗೆ ಹೇಳಿದರು.
ಪ್ರಜಾಸೌಧ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ರಸ್ತೆ ಮೇಲೆ 30 ಟನ್​ ಭಾರವಾದ ವಾಹನಗಳು ಚಲಿಸಿದರೇ ರಸ್ತೆ ಉಳಿಯಬಲ್ಲವೇ ? ಹೀಗಾಗಿ ಭಾರವಾದ ವಾಹನಗಳು ಇಂತಹ ರಸ್ತೆಗಳ ಮೇಲೆ ಓಡಾಡಲು ಕಡಿವಾಣ ಹಾಕಬೇಕು. ಕಡಿಮೆ ಮೊತ್ತಕ್ಕೆ ಟೆಂಡರ್​ ಹಾಕುತ್ತಿದ್ದಾರೆ ಎಂದರೆ, ಅಲ್ಲಿ ಗುಣಮಟ್ಟವನ್ನು ನಿರೀಸಲು ಸಾಧ್ಯವಿಲ್ಲ. ೇತ್ರದಲ್ಲಿ ಕಳಪೆ ಕಾಮಗಾರಿ ಸಹಿಸಲ್ಲ. ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಯಾಗಬಾರದು. ಬದಲಾಗಿ ಗುತ್ತಿಗೆದಾರರನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು. ಇದಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಗಮನಕ್ಕೆ ತನ್ನಿ ಎಂದು ಹೇಳಿದರು.
ಕ್ಷೇತ್ರ ಪ್ರತಿ ಹಳ್ಳಿಗೂ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ. ಹಣಾದಿ ರಸ್ತೆಗಳಿಗೆ 47 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ೇತ್ರಕ್ಕೆ ಬೇಕಾಗುವ ಅಭಿವೃದ್ಧಿ ಕೆಲಸಗಳಿಗಾಗಿ ಅಧಿಕಾರಿಗಳು ಸ್ವಂತಿಕೆಯಿಂದ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ನಾನು ಹೇಳಿದರಷ್ಟೆ ಕಾಮಗಾರಿಗಳ ಪಟ್ಟಿ ಕೋಡುತ್ತೀರಿ. ಹೊಸ&ಹೊಸ ಕೆಲಸಗಳ ಪ್ರಸ್ತಾವನೆ ಸಲ್ಲಿಸಬೇಕು. ಅಧಿಕಾರಿ, ಸಿಬ್ಬಂದಿ ೇತ್ರದ ಜನರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು. ತಾಲೂಕಿನ ವಿವಿಧ ಮಠಗಳಿಗೆ 8.5 ಕೋಟಿ ರೂ., ಶಾಲೆಗಳ ಅಭಿವೃದ್ಧಿಗೆ 16 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು.
ದ್ವಿದಳ ಮಂಡಳಿ ಅಧ್ಯಕ್ಷ ಮಹ್ಮದ್​ ಮಹಿಮೂದ್​ ಸಾಹೇಬ, ಕಾಡಾ ಅಧ್ಯಕ್ಷ ಡಾ. ಎಂಎ ರಶೀದ, ಜಿಲ್ಲಾಧಿಕಾರಿ ಬಿ ಫೌಜೀಯಾ ತರನ್ನುಮ, ಜಿಪಂ ಸಿಇಒ ಭಂವರಸಿಂಗ್​ ಮೀನಾ, ಎಸ್ಪಿ ಅಡ್ಡೂರು ಶೀನಿವಾಸಲು, ಹೆಚ್ಚುವರಿ ಎಸ್ಪಿ ಮಹೇಶ ಮೇಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್​, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​, ನಾಗಯ್ಯ ಹಿರೇಮಠ, ತಾಲೂಕು ಅಧಿಕಾರಿಗಳಾದ ರಾಜಕುಮಾರ ಮರತೂರಕರ್​, ಶೀಧರ ಸಾರವಾಡ, ಮಹ್ಮದ್​ ಅಕ್ರಂ ಪಾಶಾ, ಡಾ. ಬಸಲಿಂಗಪ್ಪ ಡಿಗ್ಗಿ, ಮಹ್ಮದ್​ ಸಲೀಮ, ಸಂಜೀವಕುಮಾರ ಮಾನಕರ, ಶಶಿಧರ ಬಿರಾದಾರ, ಡಾ. ಶಂಕರ ಕಣ್ಣಿ, ಆರತಿ ತುಪ್ಪದ, ಚೇತನ್​ ಗುರಿಕಾರ, ಸುನೀತಾ, ಫಯೂಮ್​ ಸೇರಿದಂತೆ ಇತರರಿದ್ದರು.
ನದಿಯಿದ್ರೂ ನೀರು ಯಾಕ್​ ಸಿಗ್ತಿಲ್ಲ ?
ನದಿ ದಡದ ಸನ್ನತಿಯಲ್ಲಿ ಕುಡಿವ ನೀರಿಗಾಗಿ ತೊಂದರೆಯಾಗುತ್ತಿದೆ, ಪೈಪ್​ಲೈನ್​, ನಳ ಸೇರಿ ಎಲ್ಲ ವ್ಯವಸ್ಥೆಯಿದೆ. ಆದರೆ ಏಕೆ ನೀರು ಸಿಗುತ್ತಿಲ್ಲ ? ಕೂಡಲೇ ಗ್ರಾಮದ ಎಲ್ಲ ಬಡಾವಣೆಗಳಿಗೆ ನೀರು ಕಲ್ಪಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ 400 ಶೌಚಗೃಹ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ. ಮತೇತ್ರದಲ್ಲಿ ಪ್ರಾಯೋಗಿಕವಾಗಿ 30 ಶೌಚಗೃಹ ಪೈಕಿ ಇನ್ನೂ 11 ಶೌಚಗೃಹಗಳ ಕಾಮಗಾರಿ ಬಾಕಿ ಇದೆ. ಅದನ್ನು ಕೂಡಲೇ ನಿರ್ಮಾಣ ಮಾಡಬೇಕು. ಚಿತ್ತಾಪುರದಲ್ಲಿ ಉಗ್ರಾಣ ಹಾಗೂ ಕೋಲ್ಡ್​ ಸ್ಟೋರೇಜ್​ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.
"

ಚಿತ್ತಾಪುರದಲ್ಲಿ ಮಾ.8ರಂದು ಮುಖ್ಯಮಂತಿ ಸಿದ್ರಾಮಯ್ಯ, ರಾಜ್ಯಸಭಾ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು 1085 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಕೆಲಸಗಳು ಹಾಗೂ 85 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. 

> ಪ್ರಿಯಾಂಕ್​ ಖರ್ಗೆ, 

ಜಿಲ್ಲಾ ಉಸ್ತುವಾರಿ ಸಚಿವ