ಸೇಡಂನಲ್ಲಿ ಛಲವಾದಿ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಗೆ ಹಣಮಂತ ಸಾಗರ್ ಚಾಲನೆ ನೀಡಿದರು. ಗೌತಮ್ ಹಳ್ಳಿ, ಶಿವಕುಮಾರ ತೊಟ್ನಳ್ಳಿ, ವಿಲಾಸಗೌತಂ, ಶ್ರೀನಿವಾಸ ಸಂಗಾವಿ ಇದ್ದರು.
- ನಗರ ಆಶ್ರಯ ಸಮಿತಿ ಸದಸ್ಯ ವಿಲಾಸಗೌತಂ ಕರೆ
- ಸೇಡಂನಲ್ಲಿ ಪ್ರಬಂಧ ಸ್ಪರ್ಧೆ
ಸೇಡಂ: ಪಠ್ಯದ ಜತೆಗೆ ಜಗತ್ತಿನ ಪ್ರಚಲಿತ ವಿಧ್ಯಮಾನಗಳ ತಿಳಿವಳಿಕೆ ಹಾಗೂ ದಾರ್ಶನಿಕರ, ಮಹಾನ್ ವ್ಯಕ್ತಿಗಳ, ಸ್ವಾತಂತ್ರ$್ಯ ಹೋರಾಟಗಾರರ ಕುರಿತು ಅಧ್ಯಯನ ಮಾಡುವುದು ಅವಶ್ಯಕ ಎಂದು ನಗರ ಆಶ್ರಯ ಸಮಿತಿ ಸದಸ್ಯ ವಿಲಾಸಗೌತಂ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಛಲವಾದಿ ಸಮಾಜದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಮಾತನಾಡಿ, ಪ್ರಬಂಧ ಸ್ಪರ್ಧೆಯು ಸಾಮಾಜಿಕ ಸಮಾನತೆ, ಶಿಕ್ಷಣ ಮತ್ತು ಸಂವಿಧಾನದ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಆಳವಾದ ಅಧ್ಯಯನಕ್ಕೆ ಪೋತ್ಸಾಹ ನೀಡಲಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಶ್ರೀನಿವಾಸ ಸಂಗಾವಿ ಮಾತನಾಡಿ, ಸೋಷಿಯಲ್ ಮಿಡಿಯಾಗಳಲ್ಲಿ ಸ್ಟೇಟಸ್ ಹಾಕುವುದಕ್ಕೆ ನಾವು ಅಂಬೇಡ್ಕರ್ ಅವರನ್ನು ಸೀಮಿತಗೊಳಿಸಿದ್ದೇವೆ. ಡಾ.ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಅಸ್ಪಶ್ಯತೆ ಮತ್ತು ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿದವರು. ಶೋಷಿತರಿಗೆ ನೀರು, ಶಿಕ್ಷಣ, ನತೆಯ ಹಕ್ಕನ್ನು ಕೊಡಿಸಲು ಸರ್ವಸ್ವವನ್ನೂ ಅರ್ಪಿಸಿದರು. ದೇಶ ಸೇವೆಗಾಗಿ ತಮ್ಮ ವೃತ್ತಿ ಜೀವನ, ಸುಖ&ಸಂತೋಷಗಳನ್ನು ತ್ಯಜಿಸಿದವರು. ಅಂತಹ ಮಹಾನ್ ಚೇತನದ ಕುರಿತು ಅಧ್ಯಯನ ಮಾಡುವುದು ಅವಶ್ಯ ಎಂದು ಹೇಳಿದರು.
ಹಿರಿಯ ಮುಖಂಡ ಹಣಮಂತ ಸಾಗರ ಸ್ಪರ್ಧೆಗೆ ಚಾಲನೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೌತಮ್ ಹಳ್ಳಿ, ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ಪ್ರಮುಖರಾದ ಡಾ.ರವೀಂದ್ರ ಕುಂಬಾರ, ಡಾ.ಕೌಸರ್ ಫಾತಿಮಾ, ಡಾ.ಮಲ್ಲಿಕಾರ್ಜುನ, ಸುಧೀರ ಬಿರಾದಾರ, ಸಾಗರ ಕಲಕಂಭ, ಈಶ್ವರಾಜ ಮಾದ್ವಾರ, ಈಶ್ವರಾಜ ಚಿಂತಪಳ್ಳಿ ಇದ್ದರು.