ನದಿಗಳ ಜೋಡಣೆ ಅಧ್ಯಯನ ಶುರು river alignment
- ಮಾಜಿ ಸಚಿವ ರಾಮದಾಸ್ ನೇತೃತ್ವದಲ್ಲಿ ವಿವಿಧೆಡೆ ಸಮೀಕ್ಷೆ
- ಮುಳಬಾಗಿಲಿನಿಂದ ತಿರುಪತಿಯತ್ತ ಪಯಣ
ಮುಳಬಾಗಿಲು: ನದಿಗಳ ಜೋಡಣೆ ಕುರಿತು ಕೇಂದ್ರ ಸರ್ಕಾರ ದೂರದೃಷ್ಟಿ ಯೋಜನೆ ರೂಪಿಸಲು ತಜ್ಞರ ಸಮಿತಿ ರಚಿಸಿದೆ. ಮೈಸೂರಿನ ವಾಜಿ ಸಚಿವ ರಾಮದಾಸ್ ಸಮಿತಿ ಸದಸ್ಯರಾಗಿದ್ದು, ಕೇಂದ್ರದ ಅಧಿಕೃತ ಅಧ್ಯಯನಕ್ಕೂ ಮುನ್ನ ರಾಮದಾಸ್ ತಂಡ ನದಿಗಳ ಜೋಡಣೆ ಕುರಿತು ಪ್ರತ್ಯೇಕ ಸಮಿತಿ ಮೂಲಕ ಮುಳಬಾಗಿಲಿನಿಂದ ತಿರುಪತಿವರೆಗೆ ಸದ್ದಿಲ್ಲದೆ ಸಮೀಕ್ಷೆ ಕೈಗೊಂಡಿದೆ. river alignment
ನಗರದ ಶ್ರೀ ಆಂಜನೇಯಸ್ವಾಮಿ ಮತ್ತು ಮೈಸೂರು ಸಂಸ್ಥಾನದ ಮಹಾರಾಜ ಭಾವಚಿತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಿ ತಿರುಪತಿಯತ್ತ ತಂಡ ಪಯಣ ಬೆಳೆಸಿದ್ದು, ಅಲ್ಲಲ್ಲಿ ಸಿಗುವ ನದಿಗಳ ಕುರಿತು ಅಧ್ಯಯನ ನಡೆಸಿ, ಯಾವ ಯಾವ ನದಿಗಳನ್ನು ಜೋಡಣೆ ಮಾಡಬಹುದು, ಅವುಗಳ ಸಾಧಕ-ಬಾಧಕಗಳ ಕುರಿತು ಮಾಹಿತಿ ಸಂಗ್ರಹಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.
ಅತಿವೃಷ್ಟಿ-ಅನಾವೃಷ್ಟಿಯಿಂದ ಉಂಟಾಗುವ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ವಿಶೇಷವಾಗಿ ಈ ಬಗ್ಗೆ ಸಾಧಕ ಬಾಧಕಗಳ ಅಧ್ಯಯನ ವಾಡುತ್ತಿದೆ. ಈಗಾಗಲೇ 1,600 ಕಿ.ಮೀ. ಪರ್ಯಾಟನೆ ವಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
ನದಿಗಳ ಅಧ್ಯಯನಕ್ಕೆ ಅಡ್ಡಿ ಬಾರದಿರಲಿ ಎಂದು ಧಾರ್ಮಿಕ ಪ್ರವಾಸದೊಂದಿಗೆ ಅಧ್ಯಯನ ಆರಂಭಿಸಲಾಗಿದೆ.
ಋಷಿವರೇಣ್ಯರ ಪೌರಾಣಿಕ ಮಹತ್ವವಿರುವ ಅಗಸ್ತ್ಯ ಮಹರ್ಷಿ ಒಬ್ಬ ಋಷಿ ವಾತ್ರವಲ್ಲ, ಭಾರತದ ಬೌದ್ಧಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿನಿಧಿಯಾಗಿದ್ದರು ಎಂಬ ಹಿನ್ನೆಲೆಯಲ್ಲಿ ರಾಮದಾಸ್ ಅವರು ತಿರುಪತಿ ತಿಮ್ಮಪ್ಪನ ದರ್ಶನದ ನಂತರ ತಿರುಪತಿಯಲ್ಲಿರುವ ಅಗಸ್ತ್ಯ ಮಹರ್ಷಿ ಮಹಾಮಹಿಮ ಸ್ಥಳಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.