ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಮೇ 31ರವರೆಗೆ ಸಿಯುಇಟಿ-ಐಸಿಎಆರ್-2026ರ ಪ್ರವೇಶ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳ ಮನವಿ ಮೇರೆಗೆ ಪರೀಕ್ಷೆಯನ್ನು ಮೇ 26ರಿಂದ ಜೂ.1ಕ್ಕೆ ಮುಂದೂಡಲಾಗಿದೆ.
- ಜೂ.2ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ
- ಈ ವಾರಾಂತ್ಯಕ್ಕೆ ಸಿಇಟಿ ಫಲಿತಾಂಶವನ್ನು ನಡೆಸುವ ಸಂಬಂಧ ಕೆಇಎ ಸಿದ್ಧತೆಗಳನ್ನು ಮಾಡಿಕೊಂಡಿದೆ.
- ಕೃಷಿ ಪ್ರಾಯೋಗಿಕ ಫಲಿತಾಂಶದ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸಬೇಕೋ ಅಥವಾ ಕೃಷಿ ವಿಜ್ಞಾನವನ್ನು ಹೊರತುಪಡಿಸಿ ಉಳಿದ ಫಲಿತಾಂಶಗಳನ್ನು ಪ್ರಕಟಿಸುವುದೋ ಎಂದು ಆಲೋಚಿಸಲಾಗುತ್ತಿದೆ.
ಬೆಂಗಳೂರು: ಹಿರಿಯೂರು ಕೇಂದ್ರದಲ್ಲಿ ಮಂಗಳವಾರ ನಡೆಯಬೇಕಿದ್ದ ಯುಜಿಸಿಇಟಿ-2026ರ ಕೃಷಿ ಕೋಟಾ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಜೂ.1ಕ್ಕೆ ಮುಂದೂಡಲಾಗಿದೆ. ಪರಿಣಾಮ, ಸಿಇಟಿ ಫಲಿತಾಂಶ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕೆಇಎ ಮೂಲಗಳು ತಿಳಿಸಿವೆ.
ಈ ಮೊದಲು ನಿರ್ಧರಿಸಿದಂತೆ ಮರು ಪರೀಕ್ಷೆಯನ್ನು ಮೇ 26ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಮೇ 31ರವರೆಗೆ ಸಿಯುಇಟಿ-ಐಸಿಎಆರ್-2026ರ ಪ್ರವೇಶ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳ ಮನವಿ ಮೇರೆಗೆ ಪರೀಕ್ಷೆಯನ್ನು ಮೇ 26ರಿಂದ ಜೂ.1ಕ್ಕೆ ಮುಂದೂಡಲಾಗಿದೆ.
ಜೂ.1ರಂದು ಬೆಳಗ್ಗೆ 9 ಗಂಟೆಗೆ ಪರೀಕ್ಷೆ ನಡೆಯಲಿದೆ. ಮೇ 10ರಂದು ನಡೆದಿದ್ದ ಕೃಷಿ ಕೋಟಾ ಪ್ರಾಯೋಗಿಕ ಪರೀಕ್ಷೆಗೆ ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಜೂ.2ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಶಿವಮೊಗ್ಗ)ದ ಕುಲಸಚಿವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಇನ್ನು ಈ ವಾರಾಂತ್ಯಕ್ಕೆ ಸಿಇಟಿ ಫಲಿತಾಂಶವನ್ನು ನಡೆಸುವ ಸಂಬಂಧ ಕೆಇಎ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೃಷಿ ಪ್ರಾಯೋಗಿಕ ಫಲಿತಾಂಶದ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸಬೇಕೋ ಅಥವಾ ಕೃಷಿ ವಿಜ್ಞಾನವನ್ನು ಹೊರತುಪಡಿಸಿ ಉಳಿದ ಫಲಿತಾಂಶಗಳನ್ನು ಪ್ರಕಟಿಸುವುದೋ ಎಂದು ಆಲೋಚಿಸಲಾಗುತ್ತಿದೆ. ಹೀಗಾಗಿ, ಫಲಿತಾಂಶದ ವಿಚಾರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಅಂಕ ದಾಖಲಿಸದ 5,508 ಅಭ್ಯರ್ಥಿಗಳು
ರಾಜ್ಯ ಪಠ್ಯಕ್ರಮ ಹೊರತುಪಡಿಸಿ ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇತರೆ ರಾಜ್ಯಗಳ ವಿವಿಧ ಮಂಡಳಿಗಳಲ್ಲಿ 12ನೇ ತರಗತಿ/ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸಿಇಟಿಗೆ ಪರಿಗಣಿಸುವುದಕ್ಕಾಗಿ ಕೆಇಎಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಆದರೆ, ಇನ್ನೂ 5,508 ಮಂದಿ ಅಂಕಗಳನ್ನು ನಮೂದಿಸಿಲ್ಲ. ಇದೆಲ್ಲವನ್ನೂ ಪರಿಗಣಿಸಿದ ಬಳಿಕ ಲಿತಾಂಶನ್ನು ಪ್ರಕಟಸಬೇಕಾಗುತ್ತದೆ.