ಆನೇಕಲ್​ ತಾಲೂಕು ಬಿದರಗೆರೆ ಎಸ್​.ಎಸ್​.ವಿ ಆಂಗ್ಲ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರಾಜಲಾಂಛನ ಸಂಸ್ಥೆ ಮತ್ತು ಅಖಿಲ ಕರ್ನಾಟಕ ಜಯಸೂರ್ಯ ಅಭಿಮಾನಿಗಳ ಸಂದಿಂದ "ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ' ಪತ್ರಿಕೆಗಳನ್ನು ವಿತರಿಸಲಾಯಿತು. ಸಾಹಿತಿ ನಾಗಲೇಖ, ಶ್ರೀನಿವಾಸ್​ ರೆಡ್ಡಿ ಇತರರು ಇದ್ದರು. 
ರಾಜ್ಯ

ವಿದ್ಯಾರ್ಥಿಗಳೇ, ಮೊಬೈಲ್​ ಬಿಟ್ಟು ಜ್ಞಾನ ವೃದ್ಧಿಸಿಕೊಳ್ಳಿ / ANEKAL

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ :

ವಿದ್ಯಾರ್ಥಿಗಳು ಮೊಬೈಲ್​ ಬಳಕೆ ಮಿತಗೊಳಿಸಿ, ಸಮಯವನ್ನು ಶಿಣ, ಪುಸ್ತಕ ಓದು ಮತ್ತು ಉತ್ತಮ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಜನಸಿರಿ ಫೌಂಡೇಷನ್​ ಸಂಸ್ಥಾಪಕ ಅಧ್ಯ, ಸಾಹಿತಿ ನಾಗಲೇಖ ಕಿವಿಮಾತು ಹೇಳಿದರು.

ತಾಲೂಕಿನ ಬಿದರಗೆರೆ ಎಸ್​.ಎಸ್​.ವಿ ಆಂಗ್ಲ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರಾಜಲಾಂಛನ ಸಂಸ್ಥೆ ಮತ್ತು ಅಖಿಲ ಕರ್ನಾಟಕ ಜಯಸೂರ್ಯ ಅಭಿಮಾನಿಗಳ ಸಂದಿಂದ "ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ' ಪತ್ರಿಕೆಗಳನ್ನು ವಿತರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದು ಆತಂಕಕಾರಿ. ಮೊಬೈಲ್​ ಅಗತ್ಯವಿದ್ದಾಗ ಮಾತ್ರ ಬಳಸಬೇಕು. ಉಳಿದ ಸಮಯವನ್ನು ಪುಸ್ತಕ ಓದುವುದು, ಕ್ರೀಡೆ ಹಾಗೂ ಾನವೃದ್ಧಿಸುವ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದರು.

ಪಾಲಕರ ತ್ಯಾಗ, ಶ್ರಮವನ್ನು ಅರಿತು, ಅವರ ಮಾತುಗಳಿಗೆ ಮಕ್ಕಳು ಬೆಲೆ ನೀಡಬೇಕು, ಗೌರವಿಸಬೇಕು. ಅವರ ಆಶೀರ್ವಾದವೇ ನಮ್ಮ ಯಶಸ್ಸಿನ ಮೂಲ. ಹಾಗೆಯೇ ಅಜ್ಜ&ಅಜ್ಜಿಯರನ್ನು ಪೂಜ್ಯ ಭಾವದಿಂದ ಕಾಣಬೇಕು. ಹಿರಿಯರ ಸಂಸ್ಕಾರ, ಮೌಲ್ಯಗಳು, ಅನುಭವ ಮತ್ತು ಮಾರ್ಗದರ್ಶನ ಜೀವನದಲ್ಲಿ ಅಮೂಲ್ಯವಾದದ್ದು ಎಂದರು.

ಅಖಿಲ ಕರ್ನಾಟಕ ಜಯಸೂರ್ಯ ಅಭಿಮಾನಿಗಳ ಸಂದ ಅಧ್ಯ ಎಚ್​.ಎ.ಶೇಖರ್​ ಮಾತನಾಡಿ, ಶಿಣವು ಸಮಾಜದ ಅಭಿವೃದ್ಧಿಗೆ ಮೂಲ ಆಧಾರ. ಮಕ್ಕಳಿಗೆ ಗುಣಮಟ್ಟದ ಉತ್ತಮ ಶಿಣ ದೊರೆಯಲು ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ರಾಜಲಾಂಛನ ಹಾಗೂ ಅಖಿಲ ಕರ್ನಾಟಕ ಜಯಸೂರ್ಯ ಅಭಿಮಾನಿಗಳ ಸಂವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಶೈಣಿಕ ಪ್ರಗತಿಗೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೀಗ ಖಾಸಗಿ ಶಾಲೆಗಳಿಗೂ ಈ ಚಟುವಟಿಕೆಗಳನ್ನು ವಿಸ್ತರಿಸಿದೆ. ವಿದ್ಯಾರ್ಥಿಗಳಿಗೆ ಶೈಣಿಕ ನೆರವು, ಪುಸ್ತಕ ವಿತರಣೆ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಶಿಣ ಸಂಸ್ಥೆಗಳು ಗುಣಮಟ್ಟದ ಶಿಣದೊಂದಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದರು.

ಜಯಸೂರ್ಯ ಅಭಿಮಾನಿಗಳ ಸಂದ ಪ್ರಧಾನ ಕಾರ್ಯದರ್ಶಿ ಉಮಾಪತಿ, ಉಪಾಧ್ಯ ಹರೀಶ್​ ಮೌರ್ಯ, ಪಧಾಧಿಕಾರಿಗಳಾದ ವರ್ತೂರು ಮುನಿಯಪ್ಪ, ಅಡವಪ್ಪ ಇದ್ದರು.

ದೊಡ್ಡ ಕನಸು ಕಾಣಿ:

ಅಖಿಲ ಕರ್ನಾಟಕ ಜಯಸೂರ್ಯ ಅಭಿಮಾನಿಗಳ ಸಂದ ಗೌರವಾಧ್ಯ ಶ್ರೀನಿವಾಸ್​ ರೆಡ್ಡಿ ಮಾತನಾಡಿ, ಗುಣಮಟ್ಟದ ಶಿಣ ನೀಡುವ ಶಾಲೆಗಳು ದೇಶದ ಭವಿಷ್ಯ ರೂಪಿಸುತ್ತವೆ. ಅಂತಹ ಶಿಣ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿ ಎಂದರು.

ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ಸನ್ಮಾನಿಸಲಾಗುತ್ತದೆ. ಆದರೆ ಪೊಲೀಸ್​ ಇಲಾಖೆ ಅಧಿಕಾರಿ ಎಲ್​.ವೈ.ರಾಜೇಶ್​ ಅವರು ಪರೀೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ತರಗತಿ ಆಯೋಜಿಸುವ ಮೂಲಕ ಮತ್ತೆ ಪರೀೆ ಬರೆದು ಉತ್ತೀರ್ಣರಾಗಲು ಪ್ರೇರೇಪಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಹಲವು ವರ್ಷಗಳಿಂದ "ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ' ಪತ್ರಿಕೆಗಳನ್ನು ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಗ್ರಾಮೀಣ ಮಕ್ಕಳಲ್ಲಿ ಓದುವ ಅಭ್ಯಾಸ, ಸಾಮಾನ್ಯ ಾನ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮಹತ್ವದ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ವಿಯಾಗಬೇಕು ಎಂಬ ರಾಜೇಶ್​ ಅವರ ಬದ್ಧತೆ ಸಮಾಜಕ್ಕೆ ಮಾದರಿ ಎಂದು ಸಾಹಿತಿ ನಾಗಲೇಖ ಮೆಚ್ಚುಗೆ ವ್ಯಕ್ತಪಡಿಸಿದರು.