ನೇಸರಗಿಯ ಕಲ್ಮೇಶ್ವರ ಶಿಣ ಸಂಸ್ಥೆ ಜ್ಞಾನಭಾರತಿ ಅಕಾಡೆಮಿಯ ಭಿತ್ತಿಪತ್ರವನ್ನು ಶಂಕರ ಬೋಳನ್ನವರ ಬಿಡುಗಡೆಗೊಳಿಸಿದರು. ಎಂ.ಆರ್​.ಬಡೇರ, ಅರುಣಕುಮಾರ ಬಂಡಗಿ ಇತರರಿದ್ದರು. 
ರಾಜ್ಯ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅವಶ್ಯ

ಬೈಲಹೊಂಗಲ: ಶಿಕರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಆದರೆ, ಮಕ್ಕಳಿಂದ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂದ ಅಧ್ಯಕ್ಷ ಶಂಕರ ಬೋಳನ್ನವರ ಹೇಳಿದರು.
ನಗರದಲ್ಲಿ ನೇಸರಗಿ ಗ್ರಾಮದ ಕಲ್ಮೇಶ್ವರ ಶಿಣ ಸಂಸ್ಥೆಯ ಜ್ಞಾನಭಾರತಿ ಅಕಾಡೆಮಿಯ ಮುರಾರ್ಜಿ, ಸೈನಿಕ ಮತ್ತು ನವೋದಯ ಶಾಲೆ ಪ್ರವೇಶ ಪರೀೆಗಳ ತರಬೇತಿ ಕೇಂದ್ರದ ಬೇಸಿಗೆ ಶಿಬಿರದ ಭಿತ್ತಿಪತ್ರ ಈಚೆಗೆ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಣ ನೀಡಿದ ಜ್ಞಾನಭಾರತಿ ಅಕಾಡೆಮಿ ಕಾರ್ಯ ಶ್ಲಾನೀಯ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯ ಮೋಹನಗೌಡ ಪಾಟೀಲ ಮಾತನಾಡಿ, ಮಗುವಿನಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಜ್ಞಾನಭಾರತಿ ಅಕಾಡೆಮಿ ಉತ್ತಮ ವೇದಿಕೆಯಾಗಿದೆ ಎಂದರು.
ಸಂಸ್ಥಾಪಕ ಕಲ್ಮೇಶ ಬೆಳಗಾವಿ ಹಾಗೂ ತೇಜಸ್ವಿನಿ ಬೆಳಗಾವಿ ಮಾತನಾಡಿ, ಎಲ್​ಕೆಜಿ, ಯುಕೆಜಿ, 1ರಿಂದ 2ನೇ ತರಗತಿ ಮಕ್ಕಳಿಗೆ ಬೇಸಿಕ್​ ೌಂಡೇಷನ್​, 3ರಿಂದ 5ನೇ ತರಗತಿವರೆಗೆ ಮುರಾರ್ಜಿ, ಸೈನಿಕ, ಆದರ್ಶ, ನವೋದಯ, ಆಳ್ವಾಸ್​, ರಾಣಿ ಚನ್ನಮ್ಮ ಶಾಲೆಗಳ ಪ್ರವೇಶ ಪರೀೆ ಹಾಗೂ 6ರಿಂದ 9ನೇ ತರಗತಿ ಮಕ್ಕಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್​ ಹಾಗೂ ಸಾಮಾನ್ಯ ಜ್ಞಾನ ತರಬೇತಿ ನೀಡಲಾಗುವುದು ಎಂದರು. ಪತ್ರಕರ್ತ ಎಂ.ಆರ್​.ಬಡೇರ, ಅರುಣಕುಮಾರ ಬಂಡಗಿ, ಚಂದ್ರು ನೀಲಪ್ಪನ್ನವರ, ಸರಸ್ವತಿ ನೀಲಪ್ಪನ್ನವರ, ಈರಣ್ಣ ಹಿರೇಕೊಪ್ಪ, ಸಂಜು ಪವಾರ ಇತರರಿದ್ದರು.