ರಾಮದುರ್ಗದ ಎಸ್​.ಐ.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸತಿಕ, ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಅಶೋಕ ಪಟ್ಟಣ ಉದ್ಘಾಟಿಸಿದರು. ಪ್ರೊ.ಎಸ್​.ಜಿ.ಚಿಕ್ಕನರಗುಂದ, ಎಂ.ಡಿ.ಕಮತಗಿ, ವಿನಾಯಕ ಹೊಸಮನಿ, ಎ.ಬಿ.ವಗ್ಗರ, ಬಿ.ಎಲ್​.ರಾಯನಗೌಡರ, ಅಂಜಲಿ ಸಲಬನ್ನವರ ಇತರರಿದ್ದರು. 
ರಾಜ್ಯ

ವಿದ್ಯಾರ್ಥಿಗಳು ಗುರಿಯತ್ತ ಸಾಗಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ವಿಜಯವಾಣಿ ಸುದ್ದಿಜಾಲ ರಾಮದುರ್ಗ

ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ ಹಾಗೂ ಸತತ ಪರಿಶ್ರಮದಿಂದ ಸಾಧನೆಯತ್ತ ಸಾಗಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಸಲಹೆ ನೀಡಿದರು.
ನಗರದ ಶ್ರೀಮತಿ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸತಿಕ, ಕ್ರೀಡಾ, ಎನ್​ಎನ್​ಎಸ್​, ಸ್ಕೌಟ್ಸ್​ ಮತ್ತು ಗೈಡ್ಸ್​ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಮೊಬೈಲ್​ಗೆ ಮಾರು ಹೋಗಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಮೊಬೈಲ್​ ಬಿಟ್ಟು, ಪುಸ್ತಕ ಹಿಡಿದು ಭವಿಷ್ಯ ರೂಪಿಸಿಕೊಳ್ಳಬೇಕು. ಶಿಣದ ಜತೆಗೆ ಕ್ರೀಡೆ, ಸಾಹಿತ್ಯ, ವಿಜ್ಞಾನ&ತಂತ್ರಜ್ಞಾನದ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು ಎಂದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಪ್ರೊ.ಎಸ್​.ಜಿ.ಚಿಕ್ಕನರಗುಂದ ಮಾತನಾಡಿ, ಯುವ ಶಕ್ತಿ ಒಗ್ಗಟ್ಟಾದರೆ ದೇಶ ಸರ್ವ ವಿಧದಲ್ಲೂ ಬದಲಾವಣೆ ಆಗುತ್ತದೆ ಎಂದರು.
ಪ್ರಾಂಶುಪಾಲ ಎಂ.ಡಿ.ಕಮತಗಿ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಹೊಸಮನಿ ಸ್ವಾಗತಿಸಿದರು. ಎ.ಬಿ.ವಗ್ಗರ ಪರಿಚಯಿಸಿದರು. ಬಿ.ಎಲ್​.ರಾಯನಗೌಡರ ಪ್ರತಿಜ್ಞಾವಿಧಿ ಬೋಧಿಸಿದರು. ಅಂಜಲಿ ಸಲಬನ್ನವರ, ಅಜಯ ಬಿರಾದಾರ ಪಾಟೀಲ ನಿರೂಪಿಸಿದರು.