ಚನ್ನಪಟ್ಟಣ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ನಿವೃತ್ತ ಡಿವೈಎಸ್ಪಿ ಆರ್.ಸಿ. ಲೋಕೇಶ್ ಕುಮಾರ್ ಉದ್ಘಾಟಿಸಿದರು. ರಹಮತ್ ಉಲ್ಲಾ ಷರ್ೀ, ಅಲ್ಮಾಸ್ ಬಾನು, ಸೈಯದ್ ಜಫ್ರುಲ, ನಿರ್ಮಲಾ ಕ್ರೂಜ್,ಡಾ. ವಿಜಯ್ ರಾಂಪುರ ಇತರರು ಇದ್ದರು. 
ರಾಜ್ಯ

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಿ

ಚನ್ನಪಟ್ಟಣ :ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜತೆಗೆ ಶಿಸ್ತು, ಸಂಯಮ ಮತ್ತು ಸಮಯ ಪಾಲನೆ ರೂಢಿಸಿಕೊಳ್ಳುವುದು ಭವಿಷ್ಯದ ಬದುಕಿಗೆ ನಾಂದಿ ಎಂದು ನಿವೃತ್ತ ಡಿವೈಎಸ್ಪಿ ಆರ್.ಸಿ. ಲೋಕೇಶ್ ಕುಮಾರ್ ತಿಳಿಸಿದರು. leadership-qualities
ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ವಿಜೇತ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಹೊಂದುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಬಿ.ಕೆ. ಪ್ರಕಾಶ್ ಮಾತನಾಡಿ, ಇಂದಿನ ವಿದ್ಯಾರ್ಥಿ ನಾಯಕತ್ವವೇ ನಾಳಿನ ಸಮಾಜ ಮತ್ತು ರಾಷ್ಟ್ರದ ನಾಯಕತ್ವಕ್ಕೆ ಅಡಿಪಾಯ. ನಾಯಕತ್ವ ಜವಾಬ್ದಾರಿಯೇ ಹೊರತು ಪದವಿಯಲ್ಲ. ಈ ಜವಾಬ್ದಾರಿಯನ್ನು ಆರೋಗ್ಯಕರ ವಾತಾವರಣ ನಿರ್ಮಿಸಲು ಬಳಸಿಕೊಳ್ಳಿ ಎಂದು ತಿಳಿಸಿದರು. leadership-qualities
ಶಾಲಾ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿಧೇಯತೆ, ನಿರಂತರ ಅಧ್ಯಯನ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಮನೋಭಾವದ ಜತೆಗೆ ಪರಸ್ಪರ ಸ್ನೇಹ ಮತ್ತು ಸಂಬಂಧ ವೃದ್ಧಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ವಿದ್ಯಾರ್ಥಿ ಜೀವನದ ನಾಯಕತ್ವ ವಹಿಸಿದ್ದವರು ರಾಷ್ಟ್ರ ಮಟ್ಟದ ನೇತಾರರಾದ ಉದಾಹರಣೆಗಳು ಸಾಕಷ್ಟಿವೆ ಎಂದರು.
ದಿ ಆಪಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ರಹಮತ್ ಉಲ್ಲಾ ಷರ್ೀ, ಕಾರ್ಯದರ್ಶಿ ಅಲ್ಮಾಸ್ ಬಾನು, ಅಕಾಡೆಮಿಕ್ ಅಡ್ವೈಸರ್ ಸೈಯದ್ ಜಫ್ರುಲ್ಲ, ಪ್ರಾಂಶುಪಾಲೆ ನಿರ್ಮಲಾ ಕ್ರೂಜ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ್ ರಾಂಪುರ, ಆಡಳಿತಾಧಿಕಾರಿ ಎಸ್.ವಿ. ಸೌಮ್ಯಾ, ಪಿಆರ್‌ಒ ದಿವ್ಯಾ, ಸಂಯೋಜಕಿ ಸುಜಾತಾ, ದೈಹಿಕ ಶಿಕ್ಷಣ ಶಿಕ್ಷಕ ಈಶ್ವರಪ್ಪ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಹಾಜರಿದ್ದರು.