ಡಾ.ಎಸ್​.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಓರಿಯಂಟೇಶನ್​ ಹಾಗೂ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಡಾ.ಎಂ.ಬಿ.ಶೇಖರ್​, ಸಂಚಾಲಕ ವಿ.ಮುರಳಿ ಮೋಹನ್​, ಶಿಕ್ಷಾಗ್ರಹ ಸಂಸ್ಥೆಯ ವ್ಯವಸ್ಥಾಪಕ ನಾರಾಯಣ್​, ರಾಜ್ಯ ಹಂತದ ಸಂಯೋಜಕರಾದ ಬಿ.ವೆಂಕಟೇಶ್​, ಸಿ.ಸಿದ್ದರಾಜು, ಬಸವರಾಜು, ರಾಧಾ ಇತರರು ಇದ್ದರು. 
ರಾಜ್ಯ

ವಿದ್ಯಾರ್ಥಿಗಳೇ, ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯರಾಗಿ / ANEKAL

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ :

ಯುವ ಸಮುದಾಯವು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದೇಶ ನಿಮಾರ್ಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಡಾ.ಎಸ್​.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವಿ.ರಾಮಕೃಷ್ಣಪ್ಪ ಕರೆ ನೀಡಿದರು.

ಡಾ.ಎಸ್​.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ವಿವಿ ಎನ್ನೆಸ್ಸೆಸ್​, ಆನೇಕಲ್​ ಹಾಗೂ ಶಿಕ್ಷಾಗ್ರಹ ಆಂದೋಲನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಓರಿಯಂಟೇಶನ್​ ಹಾಗೂ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಯಕತ್ವದ ಸಾಮರ್ಥ್ಯ ಬೆಳೆಸಿಕೊಂಡು ಸಮುದಾಯದೊಂದಿಗೆ ಕೈಜೋಡಿಸಿ ಸಮಾಜದಲ್ಲಿ ಬದಲಾವಣೆ ತರಲು ಮುಂದಾಗಬೇಕು. ಜವಾಬ್ದಾರಿ ಕೇವಲ ಸರ್ಕಾರ ಮತ್ತು ಸರ್ಕಾರಿ ಇಲಾಖೆಗಳದ್ದಲ್ಲ. ಯುವಜನರೂ ಜವಾಬ್ದಾರಿ ಅರಿತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಪ್ರೊ.ಬಿ.ಎಸ್​.ಹೇಮಾವತಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಮಸ್ಯೆಗಳನ್ನು ಗುರುತಿಸಬೇಕು. ಅಂಗನವಾಡಿಗಳು, ಸರ್ಕಾರಿ ಶಾಲೆಗಳು ಹಾಗೂ ಸಮುದಾಯದಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆ ಅರಿತು, ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ತಿಳಿಸಿದರು.

ಶಿಕ್ಷಾಗ್ರಹ ಆಂದೋಲನದ ಉದ್ದೇಶ, ಎನ್​ಎಸ್​ಎಸ್​ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಬದಲಾವಣೆ ತರುವ ವಿಧಾನಗಳು ಹಾಗೂ ಮಿತ್ರ ಬಾಟ್​ ಬಳಸಿ ಶೈಕ್ಷಣಿಕ ಚಟುವಟಿಕೆ ಗುರುತಿಸಿ ದಾಖಲಿಸುವ ಕುರಿತು ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಮಂತ್ರ ಫಾರ್​ ಚೇಂಜ್​ ಸಂಸ್ಥೆಯ ಪ್ರಮುಖ ಉಪಕ್ರಮವಾದ ಶಿಕ್ಷಾಗ್ರಹ ಆಂದೋಲನವು 2030ರೊಳಗೆ ದೇಶದ ಒಂದು ಲಕ್ಷ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ತರಲು ಜನಾಂದೋಲನ ರೂಪಿಸುವ ಗುರಿ ಹೊಂದಿದೆ.

ಕರ್ನಾಟಕದ ಐದು ಜಿಲ್ಲಾ ಹಂತದ ವಿಶ್ವವಿದ್ಯಾಲಯ ವಲಯಗಳಲ್ಲಿ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಲು ಶಿಕ್ಷಾಗ್ರಹ ಮುಂದಾಗಿದ್ದು, ಹಂತ ಹಂತವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳಲ್ಲಿ ಶೈಕ್ಷಣಿಕ ಬದಲಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಆನೇಕಲ್​ ಭಾಗದ 20 ಕಾಲೇಜುಗಳ ಕೆಎಸ್​ಎಸ್​ ಕಾರ್ಯಕ್ರಮಾಧಿಕಾರಿಗಳು ಹಾಗೂ ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು 45 ಮಂದಿ ಭಾಗವಹಿಸಿದ್ದರು.