accident  
ರಾಜ್ಯ

ಅಪಘಾತದಲ್ಲಿ ವಿದ್ಯಾರ್ಥಿ ಸಾವು accident

ಕೊರಟಗೆರೆ:

ತಾಲೂಕಿನ ಸಿದ್ಧರಬೆಟ್ಟ ಸಮೀಪದ ನರ್ಸರಿ ತಿರುವಿನಲ್ಲಿ ಬುಧವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಿವಾಸಿ ಕಲ್ಲಪ್ಪ ಅವರ ಪುತ್ರ ಚೇತನ್​ ಕಲ್ಪಪ್ಪ ಹಜಾರೆ (17) ಮೃತ. ಮಧುಗಿರಿ ತಾಲೂಕಿನ ಮಿಡಗೇಶಿ ಹೋಬಳಿಯ ಶ್ರಾವಣಗುಳಿಯ ಶಿವಣ್ಣ ಅವರ ಪುತ್ರ ಎಸ್​.ಯಶವಂತ್​ (16) ಹಾಗೂ ರಾಯಚೂರು ಜಿಲ್ಲೆಯ ತಲೆಖಾನ್​ ಗ್ರಾಮದ ವೀರೇಶ್​ ಅವರ ಪುತ್ರ ಅಮರೇಶ್​ (16) ಗಾಯಗೊಂಡಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೇತನ್​ ಕೊರಟಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕೊರಟಗೆರೆ ಪಟ್ಟಣದ ಡಾ.ಬಿ.ಆರ್​.ಅಂಬೇಡ್ಕರ್​ ಸರ್ಕಾರಿ ಮೆಟ್ರಿಕ್​ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದ. ಗಾಯಾಳು ವಿದ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು.
accident
ಬುಧವಾರ ಕೊರಟಗೆರೆ ಜಾತ್ರೆ ಹಿನ್ನೆಲೆಯಲ್ಲಿ ಸ್ಥಳಿಯ ರಜೆ ಘೋಷಿಸಲಾಗಿದ್ದ ಕಾರಣ, ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿದ್ದ ತಮ್ಮ ಐಟಿಐ ವಿದ್ಯಾರ್ಥಿ ಸ್ನೇಹಿತನ ಬೈಕ್​ ಪಡೆದು ಸಿದ್ಧರಬೆಟ್ಟಕ್ಕೆ ತೆರಳಿದ್ದರು ಎನ್ನಲಾಗಿದೆ. ವಾಪಸಾಗುವ ವೇಳೆ ಅಪಘಾತ ಸಂಭವಿಸಿದೆ. ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾಂದೇನಹಳ್ಳಿ ಕೇಳಸೇತುವೆ ಟ್ರಾಫಿಕ್​ ಜಾಮ್​:
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ತುಮಕೂರು ಹೊವಲಯದ ಸತ್ಯಮಂಗಲ, ಸ್ವಾಂದೇನಹಳ್ಳಿ ಸರ್ವೀಸ್​ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್​ ಜಾಮ್​ ಉಂಟಾಗಿ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸಿದರು. ಗಂಟೆಗಟ್ಟಲೇ ವಾಹನಗಳು ಕಿಮೀ ಗಟ್ಟಲೇ ಸಾಲುಗಟ್ಟಿ ನಿಂತಿದ್ದರೂ ಯಾರೊಬ್ಬ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ನಿಯಂತ್ರಿಸುವ ಗೋಜಿಗೆ ಹೋಗದಿರುವ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. 3 ವರ್ಷದ ನಂತರ ನಡೆದ ಹನುಮಂತಪುರ ಪೇಟೆ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾವಿರಾರು ಭಕ್ತರು ಹನುಮಂತಪುರ ಸೇರಿ ಸುತ್ತಮುತ್ತಲ ಗ್ರಾಮಗಳಿಗೆ ಆಗಮಿಸಿದ್ದರು. ಸಾವಿರಾರು ಜನರು ಸೇರುವ ಮುನ್ಸೂಚನೆಯಿದ್ದರೂ ಪೊಲೀಸರು ಅಗತ್ಯ ಪೂರ್ವ ಮುಂಜಾಗ್ರತಾ ಕ್ರಮಕೈಗೊಳ್ಳದೇ ವಾಹನ ಸವಾರರು ಪರದಾಡಿದರು.