ಅಪಘಾತ ಸ್ಥಳ ವೀಕ್ಷಿಸುತ್ತಿರುವ ಪೊಲೀಸರು ಮತ್ತು ಸಾರ್ವಜನಿಕರು.
ದೇವನಹಳ್ಳಿ : ತನ್ನ ಗ್ರಾಮದತ್ತ ತೆರಳಲು ಐವಿಸಿ ರಸ್ತೆ ಬಳಿ ಹೆದ್ದಾರಿ ಪಕ್ಕದ ರೈಲ್ವೆ ಹಳಿ ದಾಟಲು ಹೋದ ಯುವತಿ ರೈಲಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾಳೆ. ಮೂಲತ@ ಗುಡಿಬಂಡೆ ತಾಲೂಕಿನ ಚಿಕ್ಕತಮ್ಮನಹಳ್ಳಿ ಮಂಜುನಾಥ ಅವರ ಪುತ್ರಿ ದೀಪಿಕಾ (16) ಮೃತೆ.
ದೀಪಿಕಾ ಪ್ರಥಮ ಪಿಯು ಓದುತ್ತಿದ್ದು, ತನ್ನ ತಂದೆಯ ಮರಣದ ಬಳಿಕ ತಾಯಿಯ ತವರು ಮನೆಯಾದ ತಾಲೂಕಿನ ಉಗನವಾಡಿಯಲ್ಲಿ ತಾಯಿ ಮತ್ತು ತಾತನ ಜತೆ ವಾಸವಿದ್ದಳು. ಪ್ರತಿದಿನ ಆಕಾಶ್ ಪಿಯು ಕಾಲೇಜಿಗೆ ಗ್ರಾಮದಿಂದ ಡಾಬಾಗೇಟ್ ಬಳಿಗೆ ತಾತನ ಜತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು, ಅಲ್ಲಿಂದ ಬಸ್ನಲ್ಲಿ ಹೋಗಿಬರುತ್ತಿದ್ದಳು. ಎಂದಿನಂತೆ ತಾತ ರಮೇಶ್ ಮೊಮ್ಮಗಳನ್ನು ಮಂಗಳವಾರ ಬೆಳಗ್ಗೆ ಗೇಟ್ ಬಳಿ ಬಿಟ್ಟು ಬಸ್ ಹತ್ತಿಸಿ ಹೋಗಿದ್ದರು. ಮಧ್ಯಾಹ್ನ ಕಾಲೇಜಿನಿಂದ ಬರುವಾಗ ರೈಲು ಹಳಿ ದಾಟಲು ಯತ್ನಿಸಿದ್ದು, ಚಿಕ್ಕಬಳ್ಳಾಪುರ&ಬೆಂಗಳೂರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ದೇವನಹಳ್ಳಿ ಪೊಲೀಸರ ಜತೆಗೆ ಬಯಪನಹಳ್ಳಿ ರೈಲ್ವೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈಲ್ವೆ ್ಲೆ$ಓವರ್ ನಿರ್ಮಿಸಲು ಮನವಿ : ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಐವಿಸಿ (ಇನರ್ ಕನಕ್ಟಿವಿಟಿ ರೋಡ್) ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ನಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಮೊದಲಿಂದ ಇದ್ದ ರೈಲ್ವೆ ಹಳಿ ರಸ್ತೆಯನ್ನು ಮುಚ್ಚಿರುವುದರಿಂದ ಜನರು ಸುತ್ತಿಕೊಂಡು ಬರಲಾಗದೆ ರೈಲು ಹಳಿ ದಾಟಲು ಯತ್ನಿಸಿ ವರ್ಷಕ್ಕೆ ಇಬ್ಬರೂ ಮೂವರು ರೈಲಿಗೆ ಸಿಲುಕಿ ಮೃತಪಡುತ್ತಿದ್ದಾರೆ. ಮೂರು ವರ್ಷದ ಹಿಂದೆ 11 ವರ್ಷದ ಸಂಜಯ್ ಎಂಬಾತ ಇದೇ ರೀತಿ ಮೃತಪಟ್ಟಿದ್ದು, ಅಂದಿನಿಂದ ಇಂದಿನವರೆಗೂ ಇಲ್ಲಿ ಫೈಓವರ್ಗಾಗಿ ಕೇಂದ್ರಕ್ಕೆ, ರೈಲ್ವೇ ಇಲಾಖೆ, ಮಾನವಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿ ಒತ್ತಡ ಹಾಕುತ್ತಿದ್ದೇವೆ. ಇಲ್ಲಿ ಮೇಲ್ಸೇತುವೆಗೆ ಆದೇಶವಾಗಿದೆ ಎನ್ನುತ್ತಾರೆ, ಆದರೆ ಅಲ್ಲಿಯವರೆಗೂ ಇನ್ನೆಷ್ಟು ಜೀವಗಳು ಬಲಿಯಾಗುತ್ತವೆಯೋ ಎಂದು ಟಿ.ಹೋಸಹಳ್ಳಿಯ ಸಂತೋಷ್ ಅಸಮಾಧಾನ ಹೊರಹಾಕಿದರು.