ಬಸವಕಲ್ಯಾಣ ತಾಲೂಕಿನ ಖಾನಾಪುರ ವಾಡಿ ಕ್ರಾಸ್ ಸಮೀಪದ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಮಂಗಳವಾರ ವಿದ್ಯಾರ್ಥಿ ಪರಿಷತ್ ಚುನಾವಣೆಯ ಪ್ರಕ್ರಿಯೆಗೆ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಚಾಲನೆ ನೀಡಿದರು. ಮುಖ್ಯ ಗುರುಗುರು ಮಹೇಶ ಬಾಂಗಾರ, ಆಡಳಿತ ಅಧಿಕಾರಿ ಶೋಭಾದೇವಿ ಬಿರಾದಾರ ಇತರರಿದ್ದರು
ಬಸವಕಲ್ಯಾಣ: ಖಾನಾಪೂರ ವಾಡಿ ಕ್ರಾಸ್ ಸಮೀಪದ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಮಂಗಳವಾರ ವಿದ್ಯಾರ್ಥಿ ಪರಿಷತ್ ಚುನಾವಣೆಯ ಪ್ರಕ್ರಿಯೆಗೆ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಚಾಲನೆ ನೀಡಿದರು. ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿದ ಅವರು, ಸ್ಕೂಲ್ ಕಾರ್ಯ ಚಟುವಟಿಕೆಯ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಶಾಲಾ ನಾಯಕ, ಉಪನಾಯಕ, ಹಾಗೂ ವಿವಿಧ ಪರಿಷತ್ ಹುದ್ದೆಗಳಿಗೆ ಸ್ಪರ್ಧಿಸಿದ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಣಾಳಿಕೆ ವಿದ್ಯಾರ್ಥಿಗಳ ಮುಂದೆ ಮಂಡಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಬಳಿಕ ಮತದಾನ ನಡೆಸಲಾಯಿತು. ಮುಖ್ಯ ಗುರುಗುರು ಮಹೇಶ್ ಬಾಂಗಾರ, ಆಡಳಿತ ಅಧಿಕಾರಿ ಶೋಭಾದೇವಿ ಬಿರಾದಾರ, ಸುನಿಲ ಪೂಜಾರಿ, ಪವನ್ ಕಂಚೆ, ಮಮಿತಾ ಹಾಗೂ ಶಿಕ್ಷಕರು ಇದ್ದರು.