ಸಾವಿರ ಸ್ಟೂಡೆಂಟ್ ಗೆ ಮೂರೇ ಬಸ್  
ರಾಜ್ಯ

ಸಾವಿರ ಸ್ಟೂಡೆಂಟ್ ಗೆ ಮೂರೇ ಬಸ್

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಸಾವರ ಸ್ಟೂಡೆಂಟ್ ಇದ್ದರು ಮೂರೇ ಬಸ್ ಓಡಾಟ
  • ಚಿಕ್ಕೋಡಿ ಹೊರವಲಯದಲ್ಲಿನ ಕಾಲೇಜು
  • ಬಸ್ ಸೇವೆ ಹೆಚ್ಚಿಸುವಂತೆ ಆಗ್ರಹ
ಸಾವಿರ ಸ್ಟೂಡೆಂಟ್ ಗೆ ಮೂರೇ ಬಸ್
| ಮೂಲಸೌಕರ್ಯ ಇಲ್ಲದೇ ತೊಂದರೆ| ಇದೆ ಸುಸಜ್ಜಿತ ರಸ್ತೆ,ಬಸ್ ವ್ಯವಸ್ಥೆ
ಆನಂದ ಭಮ್ಮನ್ನವರ ಚಿಕ್ಕೋಡಿ:
ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಜಿಟಿಟಿಸಿ ಕಾಲೇಜು ಹಲವು ವರ್ಷಗಳ ಕಾರ್ಯ ನಿರ್ವಹಿಸುತ್ತಿವೆ.ಇಲ್ಲಿ ವಿದ್ಯಾಭ್ಯಾಸಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ.ಆದರೆ ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲ ಜೊತೆಗೆ ಕಾಲ್ನಡಿಗೆ ಗತಿ ಎಂಬಂತಾಗಿದೆ.
ಸರ್ಕಾರದಿಂದ ಉಚಿತ ಬಸ್ ಪಾಸ್,ಶಿಕ್ಷಣ ವಿದ್ಯಾರ್ಥಿ ವೇತನ,ವಸತಿ ನಿಲಯದಲ್ಲಿ ಪ್ರವೇಶ ನೀಡುವ ಮೂಲಕ ಶಿಕ್ಷಣ ಮಟ್ಟ ಸುಧಾರಣೆ ಹತ್ತಾರು ಕಾರ್ಯಕ್ರಮ ನೀಡುತ್ತಿದೆ.ಆದರೆ ಸರ್ಕಾರಿ ಕಾಲೇಜುಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿದೆ ಇರುವುದು ವಿದ್ಯಾರ್ಥಿಗಳ ಕಾಲೇಜು ತಲುಪಲು ಪರದಾಡುವಂತೆ ಮಾಡಿದೆ.
ಸಾವಿರ ಸ್ಟೂಡೆಂಟ್ ಮೂರೇ ಬಸ್:
ಇಲ್ಲಿನ ಬಸ್ ನಿಲ್ದಾಣದಿಂದ 4 ಕಿ.ಮಿ ದೂರದಲ್ಲಿರುವ ಜಿಟಿಟಿಸಿ ಕಾಲೇಜು,ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು ಸೇರಿ ಒಟ್ಟು ಇಲ್ಲಿ ಹನ್ನೆರಡು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ.ಆದರೆ ಬೆಳಗ್ಗೆ ಸಾರಿಗೆ ಬಸ್‌ನಿಲ್ದಾಣದಿಂದ ಸಂಚರಿಸುವ ಬಸ್ಸುಗಳು 2 ಬಾರಿ ,ಸಾಯಂಕಾಲ 1 ಬಾರಿ ಮಾತ್ರ ಓಡಾಟ ನಡೆಸುತ್ತವೆ.ಉಳಿದ ಸಮಯದಲ್ಲಿ ಬಸ್ ಇಲ್ಲದೇ ಇರುವುದು ಸಾಕಷ್ಟು ತೊಂದರೆಗೆ ಎಂದು.
ಕಾಲ್ನಾಡಿಗೆ ವಿದ್ಯಾರ್ಥಿಗಳ ಸುಸ್ತು:
ನಿಗದಿತ ಬೆಳಿಗ್ಗೆ ಮತ್ತು ಸಾಯಂಕಾಲ ಸಂಚರಿಸುವ ಬಸ್ಸುಗಳು ಸಂಚಾರದಿಂದ ಪಡಿಸಿದರೆ ಉಳಿದ ಸಮಯದಲ್ಲಿ ಕಾಲೇಜಿಯಿಂದ ನಿಪ್ಪಾಣಿ-ಮುಧೋಳ ರಸ್ತೆಯ ಆರ್‌ಟಿಓ ಕಚೇರಿ ಬಳಿಯಿರುವ ಬಸ್ ನಿಲ್ದಾಣದ ವರೆಗಿನ ರಸ್ತೆ ಮಾರ್ಗದ ಮೂಲಕ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಸಂಚರಿಸುವುದು ಸರ್ವೆ ಸಾಮಾನ್ಯವಾಗಿದೆ. ಇದರ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಸಂಖ್ಯೆಗೆ ಬೆಳಗ್ಗೆ, ಸಾಯಂಕಾಲದೊಂದಿಗೆ ಮಧ್ಯಾನ್ಹವು ಬಸ್ ಅಳವಡಿಸುವಂತೆ ಕ್ರಮ ವಹಿಸಬೇಕು ಎಂಬ ಒತ್ತಾಯವಿದೆ.
ಭಾಕ್ಸ್
ಇಲ್ಲಿ ಕಳೆದ 8 ವರ್ಷದ ಹಿಂದೆ ಪ್ರಾರಂಭವಾದ ಜಿಟಿಸಿಸಿ ಡಿಪ್ಲೊಮಾ ಕಾಲೇಜಿನಲ್ಲಿ ಪ್ರಸ್ತುತ 420 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 50 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿರುತ್ತಾರೆ. ಇನ್ನುಳಿದ ಶೆ.೭೦ರಷ್ಟು ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲದಾಗಿದೆ. ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಇಲ್ಲದೇ ಬಸ್ ಸಮಸ್ಯೆಯಲ್ಲಿ ಕಾಲೇಜು ತಲುಪಬೇಕಿದೆ. ಹಾಗೂ ಕಾಲೇಜು ಬಳಿ ಸುಸಜ್ಜಿತ ರಸ್ತೆ ಇಲ್ಲದೇ ಕಚ್ಚಾ ರಸ್ತೆಯಲ್ಲಿಯೇ ಓಡಾಡಬೇಕಿದೆ.
ಕೋಟ್-
ಕಾಲೇಜಿಗೆ ಬರುವ ಬೆಳಗ್ಗೆ ಸಮಯದಲ್ಲಿ ಯಾವುದೇ ತೊಂದರೆ ಇಲ್ಲ. ಸಂಜೆ ವೇಳೆ ಒಂದೇ ಬಸ್ ಓಡಾಟದಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಇನ್ನೊಂದು ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ.
ಶೀತಲಕುಮಾರ
ಪ್ರಾಚಾರ್ಯ, ಜಿಟಿಟಿಸಿ ಕಾಲೇಜು, ಚಿಕ್ಕೋಡಿ