ಗುರುಮಠಕಲ್ ತಾಲೂಕಿನ ಚಪೇಟ್ಲಾ ಗ್ರಾಮದ ಹರಿಜನವಾಡದಲ್ಲಿ ನಿರ್ವಹಣೆ ಇಲ್ಲದ ಹಳೆಯ ಬಾವಿ.
- ಹಳೆಯ ಬಾವಿ ಹೂಳೆತ್ತಲು ಚಪೇಟ್ಲಾ ಗ್ರಾಮಸ್ಥರ ಮನವಿ
ಗುರುಮಠಕಲ್: ತಾಲೂಕಿನ ಚಪೇಟ್ಲಾ ಗ್ರಾಮದ ಹರಿಜನವಾಡದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಮೊದಲು ಜನರಿಗೆ ನೀರಿನ ಮೂಲವಾದ ಹಳೆಯ ಬಾವಿಯೊಂದು ನಿರ್ವಹಣೆ ಇಲ್ಲದ ಕಾರಣ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿ, ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿಗೆ ಸದಸ್ಯ ರಮೇಶ ಕೇಶ್ವಾರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಗ್ರಾಮದ ಪುರಾತನ ಬಾವಿಯಲ್ಲಿ ಹೇರಳವಾದ ಜಲಮೂಲವಿದೆ. ಆದರೆ, ಕಳೆದ ಎರಡು&ಮೂರು ವರ್ಷಗಳಿಂದ ಬಾವಿಯ ಸುತ್ತಮುತ್ತ ದಟ್ಟವಾಗಿ ಗಿಡಗಂಟಿ ಬೆಳೆದು ನಿಂತಿವೆ. ಬಾವಿಯ ಒಳಗೂ ಹೂಳು ಮತ್ತು ಕಸದ ರಾಶಿ ತುಂಬಿಕೊಂಡಿದ್ದರಿಂದ ನೀರು ಬಳಕೆಗೆ ಯೋಗ್ಯವಾಗಿಲ್ಲ. ಅದಕ್ಕಾಗಿ ಬಡಾವಣೆಯ ಜನರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಸಮರ್ಪಕ ನೀರು ಪೂರೈಕೆಗಾಗಿ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಆ ಪುರಾತನ ಬಾವಿಯಲ್ಲಿ ಬೆಳೆದ ಗಿಡ&ಗಂಟಿಯನ್ನು ಸ್ವಚ್ಛ ಮಾಡಿ ನೀರು ಮರು ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
"
ಗ್ರಾಮದಲ್ಲಿ ಶುದ್ದ ನೀರಿನ ಟಕ ಹಾಗೂ 1ಎಚ್ಪಿ ಮೋಟರ್ ವ್ಯವಸ್ಥೆವಿದೆ. ಕಳೆದ 2 ದಿನಗಳ ಹಿಂದೆ ಮೋಟರ್ ದುರಸ್ಥಿಗೆ ಒಳಪಟ್ಟಿದ್ದು, ಅದನ್ನು ದುರಸ್ತಿಪಡಿಸುತ್ತೇನೆ. ಬಾವಿಯಲ್ಲಿ ಬೆಳೆದ ಗಿಡ&ಗಂಟಿ ತೆರವುಗೊಳಿಸಿ ಬಡಾವಣೆಗೆ ನೀರಿನ ವ್ಯವಸ್ಥೆ ಮಾಡಲಾಗುವುದು.
— > ರಾಧಿಕ ಪಿಡಿಒ ಚಪೇಟ್ಲಾ