ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ಬೆಂಗಳೂರು ದಣ ವಿಧಾನ ಸಭಾ ೇತ್ರದ ಜಿಗಣಿ ವೃತ್ತದಲ್ಲಿ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್​ ಮುಖಂಡರಾದ ವಿನೋದ್​, ಮುರಳಿ, ಮಧುಗೌಡ, ಜಿ.ಮಧು, ಹರ್ಷ, ಮಂಜುನಾಥ್​ರೆಡ್ಡಿ, ಮಂಜುನಾಥ್​, ಪಿಲ್ಲಪ್ಪ, ಯಾರಬ್​ ಪಾಷ, ಗಣೇಶ್​, ವಿನೋದ್​, ಕುಶಾಲ್​ ಮತ್ತಿತರರು ಭಾಗವಹಿಸಿದ್ದರು. 
ರಾಜ್ಯ

ಬೆಲೆ ಏರಿಕೆಗೆ ಭಾರೀ ವಿರೋಧ / ANEKAL

ಆನೇಕಲ್​ : ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ಬೆಂಗಳೂರು ದಣ ವಿಧಾನ ಸಭಾ ೇತ್ರದ ಜಿಗಣಿ ವೃತ್ತದಲ್ಲಿ ಬುಧವಾರ ಜಿಗಣಿ ಪುರಸಭೆ ಕಾಂಗ್ರೆಸ್​ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಗಣಿ ಪುರಸಭೆ ಸದಸ್ಯ ್ಯಾನ್ಸಿ ರಮೇಶ್​ ಮಾತನಾಡಿ, ಭಾರತದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೋಅಥವಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪೋ ಎಂಬುದೇ ಗೊತ್ತಾಗುತ್ತಿಲ್ಲ. ದೇಶದ ವಿಷಯದಲ್ಲಿ ಮೋದಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪುರಸಭೆ ಸದಸ್ಯ ಆನಂದ್​ ಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಇದುವರೆಗೆ ಒಬ್ಬರಿಗೆ ಉದ್ಯೋಗ ಕೊಟ್ಟಿಲ್ಲ. ಜತೆಗೆ ಈ ಹಿಂದೆ ಕಾಂಗ್ರೆಸ್​ ಸರ್ಕಾರ ಇದ್ದಾಗ 56 ರೂ ಇದ್ದ ಅಮೆರಿಕದ ಡಾಲರ್​ ಈಗ 100 ರೂ. ಸನಿಹಕ್ಕೆ ತಲುಪಿದೆ. ಶೃಂಗಸಭೆಯಲ್ಲಿ ಚೀನಾ ತಯಾರಿಸಿದ ರೋಬೋ ನಾಯಿಯನ್ನು ತಂದು ಭಾರತದ್ದು ಎಂದು ಹೇಳಿ ವಿದೇಶದಲ್ಲಿ ಮಾನ ಮರ್ಯಾದೆ ಹರಾಜು ಮಾಡಿದ್ದಾರೆ ಎಂದರು.
ಕಾಂಗ್ರೆಸ್​ ಮುಖಂಡ ಸಂಪಂಗಿರಾಜ್​ ಮಾತನಾಡಿ, ದೇಶದಲ್ಲಿ ರೈತರು ಬೆಳೆದ ಪದಾರ್ಥಗಳನ್ನು ಅಮೆರಿಕಾಗೆ ಶೇ.20 ಸುಂಕ ಕೊಟ್ಟು ಮಾರಾಟ ಮಾಡಬೇಕು. ಅದೇ ಅಮೆರಿಕಾದ ವಸ್ತುಗಳು, ಆಹಾರ ಪದಾರ್ಥಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಯಾವುದೇ ತೆರಿಗೆ ವಿಧಿಸುವುದಿಲ್ಲ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.