ಹುಮನಾಬಾದ್​ನಲ್ಲಿ ಕೆಡಿಪಿ ಸಮಿತಿಗೆ ನಾಮನಿರ್ದೇಶನಗೊಂಡ ನೂತನ ಸದಸ್ಯರನ್ನು ಶನಿವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಸನ್ಮಾನಿಸಿದರು. 
ರಾಜ್ಯ

ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ರಾಜಶೇಖರ ಪಾಟೀಲ್​ ಸಲಹೆ
  • ಹುಮನಾಬಾದ್​ನಲ್ಲಿ ಕೆಡಿಪಿ ಸದಸ್ಯರಿಗೆ ಸನ್ಮಾನ
ಹುಮನಾಬಾದ್​: ತಾಲೂಕು ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಮಿತಿಗೆ ರಾಜ್ಯ ಸರ್ಕಾರ ಆರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು, ನೂತನ ಸದಸ್ಯರು ಜನಪರವಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಕರೆ ನೀಡಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಶನಿವಾರ ರಾಜ್ಯಪಾಲರ ಆಜ್ಞೆಯಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಆರ್​.ಮಧುಸೂದನ್​ ಈ ನೇಮಕಾತಿ ಆದೇಶದಂತೆ ತಾಲೂಕು ಮಟ್ಟದ ಕೆಡಿಪಿ ಸಮಿತಿಗೆ ನಾಮನಿರ್ದೇಶನಗೊಂಡ ಉಮೇಶ ಜಮಗಿ, ಅಮರ ಹಂದ್ರಾಳೆ, ಜ್ಞಾನೇಶ್ವರ ಭೋಸ್ಲೆ, ಶಿವಾನಂದ ಕಟ್ಟಿಮನಿ, ಸೈಯದ್​ ಯಾಸೀನ್​ ಅಲಿ ಹಾಗೂ ಸುಮಿತ್ರಾ ಪರೀಟ್​ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು. ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಗಮನಕ್ಕೆ ತರಬೇಕು. ಹಳ್ಳಿಗಳ ಜ್ವಲಂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೆಡಿಪಿ ಸಮಿತಿಯ ಕಾರ್ಯವೈಖರಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಅದರ ಮಹತ್ವವನ್ನು ವಿವರಿಸಿದ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವಂತೆ ಸದಸ್ಯರಿಗೆ ಶುಭ ಹಾರೈಸಿದರು.
ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಪ್ಸರ್​ಮಿಯಾ, ಗ್ರಾಮೀಣ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಓಂಕಾರ ತುಂಬಾ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಮಲ್ಲಿಕಾರ್ಜುನ ಮಾಳಶೆಟ್ಟಿ, ತಾಪಂ ಮಾಜಿ ಸದಸ್ಯ ಶ್ರೀಮಂತ ಪಾಟೀಲ, ಪ್ರಮುಖರಾದ ಶಂಕರನಾಗ ಸಾಹುಕಾರ, ಜೀವನ ಪೊಲೆ, ಸಂಜೀವಕುಮಾರ ಹುಣಜಿ, ಪ್ರದಿಪ ಪಸಾರ್ಗಿ, ಸಂತೋಷ ಅತಿವಾಳ, ಸುಧಾಕರ ಸಂಗಮ, ಹಾಜಿ ಪಟೇಲ್​, ಸುರೇಶ ಘಾಂಗ್ರೆ, ಮಂಜು ಸ್ವಾಮಿ, ರಾಜಕುಮಾರ ಹಳ್ಳಿಖೇಡ, ರವಿಚಂದ್ರನ್​ ಸಂಗಮ್​ ಇತರರಿದ್ದರು.