ಆಳಂದನಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀೆಗಳ ಉಚಿತ ತರಬೇತಿ ಶಿಬಿರವನ್ನು ವಿಜಯಪುರ ಚಾಣಕ್ಯ ಕರಿಯರ್​ ಅಕಾಡೆಮಿಯ ಎನ್​.ಎಂ.ಬಿರಾದಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಆರ್​.ಕೆ.ಪಾಟೀಲ್​, ಗೋವರ್ಧನ ಇತರರಿದ್ದರು. 
ರಾಜ್ಯ

ತಂದೆ-ತಾಯಿಯರ ಕನಸು ನನಸಾಗಿಸಲು ಶ್ರಮಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಎನ್​.ಎಂ.ಬಿರಾದಾರ ಕರೆ
  • ಆಳಂದನಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಶಿಬಿರ
ಆಳಂದ: ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಜಯಪುರದ ಚಾಣಕ್ಯ ಕರಿಯರ್​ ಆಕಾಡೆಮಿ ಅಧ್ಯಕ್ಷ ಎನ್​.ಎಂ.ಬಿರಾದಾರ ಕರೆ ನೀಡಿದರು.
ವೀರಶೈವ ಲಿಂಗಾಯತ ಭವನದಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀೆಗಾಗಿ 90 ದಿನಗಳ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವಕರಲ್ಲಿ ಭವಿಷ್ಯದ ಕನಸುಗಳಿಲ್ಲದಿರುವುದು ಪಾಲಕರಲ್ಲಿ ಆತಂಕ ಉಂಟು ಮಾಡಿದೆ. ತಂದೆ&ತಾಯಿಯರ ಕನಸನ್ನು ನನಸು ಮಾಡುವಲ್ಲಿ ನಿರಂತರ ಪ್ರಯತ್ನ ನಡೆಸಬೇಕು. ಬದುಕಿನ ಪರೀೆಯಲ್ಲಿ ಅನೇಕ ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಆರ್​.ಕೆ.ಪಾಟೀಲ್​ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಸೈನಿಕ ತರಬೇತಿಯಿಂದ 35 ಯುವಕರು ಸೇನೆ ಸೇರಿ ದೇಶ ಸೇವೆ ಮಾಡುತ್ತಿದ್ದಾರೆ. ಈ ಶಿಬಿರವನ್ನು ಯುವಕರು ಸದ್ಬಳಕೆ ಮಾಡಿಕೊಂಡು, ಉತ್ತಮ ಹುದ್ದೆಗೇರಬೇಕು ಎಂದು ಅಭಿಪ್ರಾಯಪಟ್ಟರು.
ೇತ್ರ ಶಿಕ್ಷಣಾಧಿಕಾರಿ ಗೋವರ್ಧನ, ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಸತೀಶ ಸನ್ಮುಖ, ಎಸ್ಸೆಸ್ಸೆಲ್ಸಿ ಪರೀೆ ನೋಡಲ್​ ಅಧಿಕಾರಿ ಪಂಕಜ ಪಾಟೀಲ್​, ಬಿಆರ್​ಸಿ ಅಣ್ಣಪ್ಪ ಹಾದಿಮನಿ, ಅಧಿಕಾರಿಗಳಾದ ವಿ.ರಂಗಸ್ವಾಮಿ ಶೆಟ್ಟಿ, ಬಿನಾಜಿ ಸೂರ್ಯವಂಶಿ, ಮರೆಪ್ಪ ಬಡಿಗೇರ ಇತರರಿದ್ದರು.
ತರಬೇತಿಗಾಗಿ 435ಕ್ಕೂ ಹೆಚ್ಚು ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಮೋದ ಪಾಂಚಾಳ ನಿರೂಪಣೆ ಮಾಡಿದರು. ಸಿದ್ದಾರ್ಥ ಹೂಸೂರೆ ಸ್ವಾಗತಿಸಿ, ವಂದಿಸಿದರು.