Strive for the success of the Independence Day celebrations.
ಆ.15ರ ಸ್ವಾತಂತ್ರ$್ಯ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಂದ ನಡೆಸುವ ಸಾಂಸತಿಕ ಕಾರ್ಯಕ್ರಮಗಳನ್ನು 3 ರಿಂದ 5 ನಿಮಿಷಗಳೊಳಗೆ ಪೂರ್ಣಗೊಳಿಸಬೇಕು. ದೇಶದ ಐಕ್ಯತೆ, ಭಾಷೆ, ಸಂಸತಿ ಬಿಂಬಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಶಾಸಕಿ ರೂಪಕಲಾ ತಿಳಿಸಿದರು.
ಸ್ವಾತಂತ್ರೊ$್ಯತ್ಸವ ಅಂಗವಾಗಿ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಶಿಕ್ಷಣ ಇಲಾಖೆಯಿಂದ ಕವಾಯತಿನಲ್ಲಿ 14 ತಂಡಗಳು ಮತ್ತು 5ತಂಡಗಳಿಂದ ಸಾಂಸತಿಕ ಕಾರ್ಯಕ್ರಮ ನಡೆಸಿಕೊಡಲು ತಿಳಿಸಿದರು.
ಕಾರ್ಯಕ್ರಮದ 10 ದಿನ ಮುಂಚಿತವಾಗಿಯೇ ನಗರಸಭಾ ಮೈದಾನ ಶುಚಿಗೊಳಿಸಿ ಮಕ್ಕಳಿಗೆ ಸಾಂಸತಿಕ ಕಾರ್ಯಕ್ರಮಗಳು ಮತ್ತು ಕವಾಯತು ಪೂರ್ವ ತಯಾರಿ ನಡೆಸಲು ಅನುವು ಮಾಡಿಕೊಡುವಂತೆ ಜತೆಗೆ ಕಾರ್ಯಕ್ರಮದ ದಿನ ಮೊಬೈಲ್ ಶೌಚಗೃಹ ವ್ಯವಸ್ಥೆ ಮಾಡುವಂತೆ ಪೌರಾಯುಕ್ತ ಶ್ರೀಧರ್ಗೆ ಸೂಚಿಸಿದರು.
ಆರೋಗ್ಯ ಇಲಾಖೆ, ಆರ್ಟಿಒ ಮತ್ತು ಉಪನೋಂದಣಾಧಿಕಾರಿ ಕಚೇರಿಯಿಂದ ಸಾರ್ವಜನಿಕರಿಗೆ ಆಯಾ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು, ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು, ರಸ್ತೆ ಅಪಘಾತಗಳು ಮೊದಲಾದವುಗಳ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ಪಾಲಕರನ್ನು ಬಲವಂತವಾಗಿ ಒಪ್ಪಿಸಿ, ಕೆಲವು ಸಂದರ್ಭಗಳಲ್ಲಿ ಪಾಲಕರ ಕಣ್ತಪ್ಪಿಸಿ ದ್ವಿಚಕ್ರ ವಾಹನ ಓಡಿಸಿ ಅಪಘಾತಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ. ಈ ಕುರಿತು ಆರ್ಟಿಒ ಅಧಿಕಾರಿಗಳು ಪ್ರಾತ್ಯಕ್ಷಿಕೆ ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಿದರು.
ಮೈದಾನದ ಬಳಿ ನೂಕು ನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿ ಸೂಕ್ತ ಬಂದೋಬಸ್ತ್ ಮಾಡಲು ರಾರ್ಬಟ್ಸನ್ಪೇಟೆ ವೃತ್ತ ನಿರೀಕ್ಷಕರಿಗೆ ಸೂಚಿಸಲಾಯಿತು.