ವಿವಿಧ ಬೇಡಿಕೆಗೆ ಆಗ್ರಹಿಸಿ ಶುಕ್ರವಾರ ಡಿಸಿ ಕಚೇರಿ ಎದುರು ಎಐಯುಟಿಯುಸಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು. ಸಂಘಟನೆ ಜಿಲ್ಲಾಧ್ಯಕ್ಷೆ ಉಮಾದೇವಿ, ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ, ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಸದಸ್ಯರಾದ ಶರಣಪ್ಪ, ತಾಜೋದ್ದಿನ್, ನಾರಾಯಣ, ಗಜಾನನ, ಮರಳಮ್ಮ, ಭೀಮಾಶಂಕರ, ಶ್ರೀಕಾಂತ, ಬಸಮ್ಮ ಇತರರಿದ್ದರು.
- ಎಐಯುಟಿಯುಸಿ ಜಿಲ್ಲಾ ಘಟಕ ಆಗ್ರಹ
- ಡಿಸಿ ಕಚೇರಿ ಎದುರು ಧರಣಿ
ಪರಿಷ್ಕೃತ ಕನಿಷ್ಠ ವೇತನವನ್ನು ಹಿಂಪಡೆಯುವ ಯತ್ನ ಸರ್ಕಾರ ಕೂಡಲೇ ಕೈಬಿಡಬೇಕು ಹಾಗೂ ಪರಿಷ್ಕೃತ ವೇತನ ಎಲ್ಲ ವಲಯಗಳ ಕಾರ್ಮಿಕರಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಲï ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಶುಕ್ರವಾರ ಜಿ¯್ಲÁಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ನಡುವೆ ಪರಿಷ್ಕೃತ ಕನಿಷ್ಠ ವೇತನ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಮಾಲೀಕರ ಒತ್ತಡಕ್ಕೆ ಮಣಿದು ವೇತನ ಜÁರಿಯನ್ನು ತಡೆಹಿಡಿಯುವುದು ಅಥವಾ ಹಿಂಪಡೆಯುವುದು ಕಾರ್ಮಿಕರ ಶಾಸನಬದ್ಧ ಹಕ್ಕಿಗೆ ಧಕ್ಕೆ ತರುವ ಕ್ರಮವಾಗಿದ್ದು, ಸರ್ಕಾರ ಇಂತಹ ಯತ್ನ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ, ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜÁರಿಗೊಳಿಸುವುದು, ಬಾಕಿ ಇರುವ ವೇತನದ (ಅರಿಯರ್ಸ್) ಮೊತ್ತವನ್ನು ಪೂರ್ವಾನ್ವಯವಾಗಿ ಕಾರ್ಮಿಕರ ಖಾತೆಗೆ ಜಮೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಪ್ರಸ್ತಾಪಿಸಲಾಯಿತು.
ಹಾಗೊಂದು ವೇಳೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಐಯುಟಿಯುಸಿ ಮುಖಂಡರು ಎಚ್ಚರಿಕೆ ನೀಡಿದರು. ಸಂಘಟನೆ ಜಿಲ್ಲಾಧ್ಯಕ್ಷೆ ಉಮಾದೇವಿ, ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ, ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಸದಸ್ಯರಾದ ಶರಣಪ್ಪ , ತಾಜೋದ್ದಿನ್, ನಾರಾಯಣ, ಗಜಾನನ, ಮರಳಮ್ಮ, ಭೀಮಾಶಂಕರ, ಶ್ರೀಕಾಂತ, ಬಸಮ್ಮ ಇತರರಿದ್ದರು.