ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಸಿಇಒ ರಾಹುಲ್​ ಸಂಕನೂರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಟಿಎಚ್​ಒ ಚೇತನ ದುಮಾಲೆ ಇತರರಿದ್ದರು. 
ರಾಜ್ಯ

ನೀರಿನ ಸಮಸ್ಯೆಗೆ ಸ್ಪಂದಿಸದಿದ್ರೆ ಕಠಿಣ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಾಹುಲ್​ ಸಂಕನೂರ ಎಚ್ಚರಿಕೆ
  • ಅಫಜಲಪುರ ತಾಲೂಕಿನಲ್ಲಿ ಸಂಚಾರ
ಅಫಜಲಪುರ: ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು ನಮ್ಮ ಧ್ಯೇಯವಾಗಿದ್ದು, ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್​ ಸಂಕನೂರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಿಸುತ್ತಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗೆ ಸ್ಪಂದಿಸಬೇಕು. ಜನಸಾಮಾನ್ಯರು ಕರೆ ಮಾಡಿದರೆ ನಿರ್ಲಕ್ಷ್ಯ ವಹಿಸುವುದು ಹಾಗೂ ಮೊಬೈಲ್​ ಸ್ವಿಚ್​ ಆಫ್​ ಮಾಡಿರುವ ಕುರಿತು ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಸ್ತೆ ಬದಿಗೆ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಗಿಡುಗಳು ನೆಡುತ್ತಿದ್ದು, ಇಲಾಖೆ ಜತೆಗೆ ರೈತರು ಕೈಜೋಡಿಸಬೇಕು. ಸಸಿಗಳ ರಕ್ಷಣೆಗೆ ಶ್ರಮಿಸಬೇಕು. ಗೊಬ್ಬೂರ (ಬಿ) ಗ್ರಾಮವು ದೊಡ್ಡದಾಗಿದ್ದು ರಾತ್ರಿ ವೇಳೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವೈದ್ಯರಿರಬೇಕು. ನರೇಗಾ ಯೋಜನೆಯಡಿ ಪಿಡಿಒಗಳು ದುಡಿವ ಕೈಗಳಿಗೆ ಕೆಲಸ ನೀಡಿ, ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ತಾಕೀತು ಮಾಡಿದರು.
ತಾಪಂ ಇಒ ಶಂಕರ ರಾಠೋಡ್​, ವಲಯ ಅರಣ್ಯಾಧಿಕಾರಿ ರೇವಣಸಿದ್ದ ತಾವರಖೇಡ, ಪ್ರಮುಖರಾದ ಡಾ.ಚೇತನ ದುಮಾಲೆ, ಸಂತೋಷಕುಮಾರ ಇನಾಮದಾರ, ಶಂಕರಗೌಡ ಪಾಟೀಲ್​, ಪ್ರತಿಭಾ ಪ್ರಿಯದರ್ಶಿನಿ, ಚಂದ್ರಕಾಂತ, ಲ್ಮ, ಅನುಸೂಯಾ ಅಷ್ಟಗಿ ಇತರರಿದ್ದರು.
ಗೊಬ್ಬುರ(ಬಿ) ಗ್ರಾಮದ ರೈತ ಪ್ರಶಾಂತ ಮಾನಕರ್​ ಅವರ ತೋಟಕ್ಕೆ ಭೇಟಿ ನೀಡಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ತಾಳೆ ಬೆಳೆ ಪ್ಲಾಂಟೇಶನ್​, ಅಂಗನವಾಡಿ ಕೇಂದ್ರ, ಅತನೂರ ಆರ್​ಎಂಎಸ್​ ಶಾಲೆ, ಅಫಜಲಪುರದಲ್ಲಿ ನಿರ್ಮಿಸಿರುವ ಅರಣ್ಯ ಇಲಾಖೆ ಕಚೇರಿಯನ್ನು ವೀಸಿದರು.