ಮಹಾಲಿಂಗಪುರದಲ್ಲಿ ಶ್ರೀಮತಿ ಭಾರತಿದೇವಿ ಮೆಮೊರಿಯಲ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಗರ್ಭೀಣಿಯರ ಮತ್ತು ಸೀರೋಗ ಉಚಿತ ತಪಾಸಣಾ ಶಿಬಿರದಲ್ಲಿ ಡಾ.ರಶ್ಮಿ ಸೋರಗಾಂವಿ ಮಾತನಾಡಿದರು. ಡಾ.ಬಿ.ಡಿ.ಸೋರಗಾಂವಿ, ಡಾ.ಅಶ್ವೀನಿ ಕೊಲ್ಲೂರ, ಚಂದ್ರಶೇಖರ ಮೋರೆ, ಡಾ. ಸೌಮ್ಯ ಹೊಸಪೇಟಿ, ಡಾ. ಪವನ ಸೋರಗಾಂವಿ ಇತರರಿದ್ದರು.
- ಡಾ.ರಶ್ಮೀ ಪಿ.ಸೋರಗಾಂವಿ ಹೇಳಿಕೆ
- ಉಚಿತ ತಪಾಸಣಾ ಶಿಬಿರ
ಮಹಾಲಿಂಗಪುರ: ಮದುವೆಯಾದ ಬಳಿಕ ಹಲವು ವರ್ಷಗಳಾದರೂ ಸಂತಾನವಾಗದಿದ್ದರೆ ಚಿಂತೆಪಡುವ ಅಗತ್ಯವಿಲ್ಲ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಬಂಜೆತನಕ್ಕೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದ್ದು, ನುರಿತ ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಎಂದು ಡಾ. ರಶ್ಮೀ ಪಿ. ಸೋರಗಾಂವಿ ಹೇಳಿದರು.
ಪಟ್ಟಣದ ಶ್ರೀಮತಿ ಭಾರತಿದೇವಿ ಮೆಮೊರಿಯಲ್ ಆಸ್ಪತ್ರೆಯಲ್ಲಿ ದಿ. ಶಶಿಕಾಂತ ಧಡೂತಿ ಅವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಗರ್ಭಿಣಿಯರ ಮತ್ತು ಸ್ತ್ರೀರೋಗ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ಒತ್ತಡಪೂರ್ಣ ಜೀವನಶೈಲಿ, ಅಸ್ವಸ್ಥ ಆಹಾರ ಪದ್ಧತಿ, ಹಾರ್ಮೋನ್ ಅಸಮತೋಲನ, ಮುಟ್ಟಿನ ಸಮಸ್ಯೆಗಳು, ಥೈರಾಯ್ಡ, ರಕ್ತದೊತ್ತಡ ಮತ್ತು ಮಧುಮೇಹ ಇತ್ಯಾದಿ ಕಾರಣಗಳಿಂದ ಮಹಿಳೆಯರಲ್ಲಿ ಗರ್ಭಧಾರಣೆಯಲ್ಲಿ ತೊಂದರೆ ಉಂಟಾಗುತ್ತಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬಹುದು ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ನೂರಾರು ಗರ್ಭಿಣಿಯರು ಮತ್ತು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಅಧಿಕ ಮಾಸದ ನಿಮಿತ್ತ ಸುಮಾರು 400ಕ್ಕೂ ಹೆಚ್ಚು ಮಹಿಳೆಯರಿಗೆ ಬಟ್ಟಲು, ವಸ್ತ್ರ, ಎಲೆ, ಅಡಿಕೆ, ಅರಿಶಿನ, ಕುಂಕುಮ ನೀಡಿ ಸಾಂಪ್ರದಾಯಿಕವಾಗಿ ಉಡಿತುಂಬುವ ಕಾರ್ಯಕ್ರಮವೂ ನಡೆಯಿತು.
ಡಾ. ಬಿ.ಡಿ. ಸೋರಗಾಂವಿ, ಡಾ. ಅಶ್ವೀನಿ ಕೊಲ್ಲೂರ (ಹುಬ್ಬಳ್ಳಿ), ಉಪನ್ಯಾಸಕಿ ಡಾ. ಸುನಂದಾ ಸೋರಗಾಂವಿ, ಜಿಲ್ಲಾ ಕಾನಿಪ ಸದಸ್ಯ ಚಂದ್ರಶೇಖರ ಮೋರೆ, ಡಾ. ಸೌಮ್ಯ ಹೊಸಪೇಟಿ, ಡಾ. ಪವನ ಸೋರಗಾಂವಿ, ಆನಂದ ಗುಂಡಾ, ವಿನೋದ ಬಿರಾದಾರ್, ರಾಕೇಶ್ ಗುಂಡಾ ಹಾಗೂ ಅಲ್ಲಪ್ಪ ಗುಂಜಿಗಾವಿ ಸೇರಿ ಹಲವರು ಉಪಸ್ಥಿತರಿದ್ದರು.